ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದ ಈ ಜೋಡಿ ಇದೀಗ ಹಿಂದಿರುಗಿದ್ದಾರೆ. ಈ ಬೆನ್ನಲ್ಲೇ ಶಾರುಖ್ ನಟನೆಯ `ಜವಾನ್’ ಸಿನಿಮಾಗೂ ಹಾಜರಾಗಿದ್ದಾರೆ.
ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಜೂನ್ ೯ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಹನಿಮೂನ್‌ಗಾಗಿ ಈ ಜೋಡಿ ವಿದೇಶಕ್ಕೆ ಹಾರಿತ್ತು. ಈಗ ಮತ್ತೆ ಮನೆಗೆ ವಾಪಸ್ ಆಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.
ಹನಿಮೂನ್‌ನಿಂದ ನೇರವಾಗಿ ಮುಂಬೈಗೆ ಬಂದಿರುವ ನಯನತಾರಾ, ಅಟ್ಲೀ ನಿರ್ದೇಶನದ ಜವಾನ್ ಚಿತ್ರೀಕರಣದಲ್ಲಿ ನಯನತಾರಾ ಭಾಗಿಯಾಗಲಿದ್ದಾರೆ. ಜುಲೈ ಎರಡನೇ ವಾರದ ಅಂತ್ಯದವೆಗೆಗೂ ಶೂಟಿಂಗ್ ಇರಲಿದೆ. ಶಾರುಖ್‌ಗೆ ಮೊದಲ ಬಾರಿಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ತಿದ್ದಾರೆ. ಟೀಸರ್‌ನಿಂದ ಹೈಪ್ ಕ್ರಿಯೇಟ್ ಮಾಡಿರುವ ʻಜವಾನ್ʼ , ಚಿತ್ರಮಂದಿರದಲ್ಲಿ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv