ಕಾಲಿವುಡ್ ನಟಿ ನಯನತಾರಾ (Nayanathara) ಹೊಸ ಬಗೆಯ ಪಾತ್ರಗಳಲ್ಲಿ ಮಿಂಚುತ್ತಿರುತ್ತಾರೆ. ಲೇಡಿ ಸೂಪರ್ ಸ್ಟಾರ್ ಆಗಿ ಮಹಿಳಾ ಪ್ರಧಾನ ಪಾತ್ರಗಳಲ್ಲಿಯೂ ನಟಿಸಿ ಗೆದ್ದಿದ್ದಾರೆ. ಡಿಸೆಂಬರ್‌ನಲ್ಲಿ ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿದೆ. ಈಗ ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ನಟಿಸಿದ್ದರು. ಅವರ ಮನೋಜ್ಞ ನಟನೆಗೆ ನಯನತಾರಾ ಮೆಚ್ಚುಗೆ ಸೂಚಿಸಿದ್ದಾರೆ.
Advertisement
ಹಿರಿಯ ನಟ ಅಚ್ಯುತ್ ಕುಮಾರ್, ಕನ್ನಡ ಸಿನಿಮಾ ಮಾತ್ರವಲ್ಲದೇ ಬಹುಭಾಷಾ ಕಲಾವಿದನಾಗಿ ಸಾಕಷ್ಟು ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಅವರ ಸಹಜ ನಟನೆಗೆ ಪ್ರೇಕ್ಷಕರು ಮೆಚ್ಚಿದ್ದಾರೆ. ಈಗ ನಟಿ ನಯನತಾರಾ ಕೂಡ ಕೊಂಡಾಡಿದ್ದಾರೆ. ಇದನ್ನೂ ಓದಿ:ನಟಿ ಲೀಲಾವತಿ ಅವರ ಒಂದು ತಿಂಗಳ ತಿಥಿ ಕಾರ್ಯ
Advertisement
Advertisement
ಅಚ್ಯುತ್ ಅವರ ಆಯ್ಕೆ ಮತ್ತು ನಟನೆಯ ಬಗ್ಗೆ ನಯನತಾರಾ ಮಾತನಾಡಿದ್ದಾರೆ. ಈ ಹಿಂದೆ ನನಗೆ ತಂದೆಯ ಪಾತ್ರವನ್ನು ಮಾಡಿರಬಾರದು ಅಂಥ ಕಲಾವಿದರನ್ನು ನಿರ್ದೇಶಕರು ಹುಡುಕುತ್ತಿದ್ದರು. ಕೊನೆಗೆ ಅಚ್ಯುತ್ ಕುಮಾರ್ (Achyuth Kumar) ಅವರನ್ನು ಫೈನಲ್ ಮಾಡಿದೆವು ಎಂದು ಮಾತನಾಡಿದ್ದಾರೆ.
Advertisement
ನಮ್ಮ ಸಿನಿಮಾದಲ್ಲಿ ತಂದೆಯ ಪಾತ್ರ ಹೇಗೆ ಇದೆಯೋ ಹಾಗೆಯೇ ಅಚ್ಯುತ್ ಅವರು ಸೆಟ್‌ನಲ್ಲಿ ಇರುತ್ತಿದ್ದರು. ಅವರಿಗೆ ತಮಿಳು ಬರುವುದಿಲ್ಲ. ಸನ್ನೆಯಲ್ಲಿಯೇ ಮಾತನಾಡಿಸುತ್ತಿದ್ದರು. ಆದರೆ ಅವರ ನಟನೆ ಅದ್ಭುತವಾಗಿದೆ. ನನಗೆ ತಂದೆ ರೀತಿಯೇ ಫೀಲ್ ಆಯಿತು ಎಂದು ಅಚ್ಯುತ್ ಬಗ್ಗೆ ನಯನತಾರಾ ಹಾಡಿ ಹೊಗಳಿದ್ದಾರೆ. ಸದ್ಯ ನಯನತಾರಾ ಮಾತನಾಡಿರುವ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.