ಇಂದು ಬೆಳಗ್ಗೆ 8.10ಕ್ಕೆ ಚೆನ್ನೈನ ಮಹಾಬಲಿಪುರಂನ ರೆಸಾರ್ಟ್‌ವೊಂದರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಲೇಡಿ ಸೂಪರ್ ಸ್ಟಾರ್ ನಯನತಾರಾ. ಈ ಮದುವೆಯ ವೀಡಿಯೋಗಳನ್ನು ಓಟಿಟಿಗೆ ಮಾರಿಕೊಂಡಿದ್ದರಿಂದ ಫೋಟೋ ಮತ್ತು ವೀಡಿಯೋಗಳು ಇತರ ಮಾಧ್ಯಮಗಳಿಗೆ ಸಿಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೀಗ ಫೋಟೋ ರಿವೀಲ್ ಆಗಿದೆ. ಸ್ವತಃ ವಿಘ್ನೇಶ್ ಅವರೇ ತಮ್ಮ ಮದುವೆ ಫೋಟೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ತಮಿಳಿನ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್, ಕನ್ನಡದಿಂದ ಉಪೇಂದ್ರ, ತೆಲುಗಿನಿಂದ ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಸೆಲಿಬ್ರಿಟಿಗಳು ಈ ಮದುವೆಯ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ರಜನಿಕಾಂತ್ ಅವರೇ ಮುಂದೆ ನಿಂತುಕೊಂಡು ಮದುವೆ ಮಾಡಿಸಿದ್ದು, ನೂತನ ದಂಪತಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ರಜನಿಕಾಂತ್, ಶಾರೂಖ್ ಖಾನ್, ದಿಲೀಪ್, ದಿವ್ಯ ದರ್ಶಿನಿ, ಬೋನಿ ಕಪೂರ್, ಖ್ಯಾತ ನಿರ್ದೇಶಕ ಮಣಿರತ್ನಂ ಸೇರಿದಂತೆ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ. ಸೆಲಿಬ್ರಿಟಿಗಳು ಉಳಿದುಕೊಳ್ಳುವುದಕ್ಕಾಗಿಯೇ ನೂರಕ್ಕೂ ಹೆಚ್ಚು ಕೋಣೆಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಇದೆ.