CinemaLatestMain PostSouth cinema

ಮೊದಲ ತಿಂಗಳ ವಿವಾಹ ಸಂಭ್ರಮ ಆಚರಿಸಿಕೊಂಡ ನಯನತಾರಾ ಮತ್ತು ವಿಘ್ನೇಶ್ ಶಿವನ್

Advertisements

ಮಿಳು ಸಿನಿಮಾ ರಂಗ ಖ್ಯಾತ ಜೋಡಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ ಇಂದಿಗೆ ಒಂದು ತಿಂಗಳ ಕಳೆಯಿತು. ಹಾಗಾಗಿ ನಯನತಾರಾ ಆ ದಿನವನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ರಜನಿಕಾಂತ್ ಮತ್ತು ಶಾರುಖ್ ಖಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ನಯನತಾರಾ ಮೊದಲ ತಿಂಗಳ ವಿವಾಹ ಸಂಭ್ರಮವನ್ನು ನೆನಪಿಸಿಕೊಂಡಿದ್ದಾರೆ.

ನಯನತಾರಾ ಮತ್ತು ವಿಘೇಶ್ ಶಿವನ್ ಮದುವೆಗೆ ದಕ್ಷಿಣದ ಹಲವು ತಾರೆಯರು ಮತ್ತು ಬಾಲಿವುಡ್ ನ ಶಾರುಖ್ ಖಾನ್ ಹಲವು ಗಣ್ಯರು ಆಗಮಿಸಿದ್ದರು. ಅದರಲ್ಲೂ ನಯನತಾರಾ ತುಂಬಾ ಇಷ್ಟ ಪಡುವಂತಹ ರಜನಿಕಾಂತ್ ಮದುವೆಗೆ ಬಂದಿದ್ದು, ಅವರಿಗೆ ಎಲ್ಲಿಲ್ಲದ ಸಂಭ್ರಮಕ್ಕೆ ಕಾರಣವಾಗಿತ್ತು. ಹಾಗಾಗಿ ಈ ಫೋಟೋವನ್ನೇ ಪ್ರಮುಖವಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಯನತಾರಾ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆಗೂ ಮುನ್ನ ಜೊತೆಯಲ್ಲೇ ವಾಸವಿದ್ದರು ಎನ್ನಲಾಗುತ್ತಿದೆ. ಹಾಗಾಗಿ ಈ ಜೋಡಿಯ ಮದುವೆ ಯಾವಾಗ ನಡೆಯಲಿದೆ ಎನ್ನುವ ಪ್ರಶ್ನೆ ಸದಾ ಕೇಳಿ ಬರುತ್ತಿತ್ತು. ಅದಕ್ಕೆ ಉತ್ತರ ಎನ್ನುವಂತೆ ಜೂನ್ 09ರಂದು ಈ ಜೋಡಿ ಚೆನ್ನೈನಲ್ಲಿ ಸಪ್ತಪದಿ ತುಳಿದಿದ್ದರು. ಈಗ  ಆ ದಿನವನ್ನು ನೆನಪಿಸಿಕೊಂಡಿದೆ ಜೋಡಿ.

Live Tv

Leave a Reply

Your email address will not be published.

Back to top button