ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯ ವಿಚಾರ ಸಖತ್ ಸುದ್ದಿ ಮಾಡುತ್ತಿದೆ. ಕಳೆದ ಆರು ವರ್ಷಗಳಿಂದ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಸುತ್ತಿದ್ದು, ಈಗ ಮದುವೆಯ ಆಮಂತ್ರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಯನತಾರಾ ಮದುವೆಯ ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕಳೆದ ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣಣೆ ಶುರುವಾಗಿದೆ. ಇದೀಗ ನಯನತಾರಾ ಮತ್ತು ವಿಘ್ನೇಶ್ ಮದುವೆ ಆಮಂತ್ರಣ ಲೀಕ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಹಂಚಿಕೊಂಡ ಸೋನಮ್ ಕಪೂರ್
And here it is ????????????????
Nayan Weds Wikki….
The wedding we all awaited for…
Save the date 9th June 2022#wikkinayan #Nayanthara #Ladysuperstar pic.twitter.com/19SrsdekOo
— Nayan_my_world¹⁷ʸᵉᵃʳˢᴼᶠᴺᵃʸᵃⁿᶦˢᵐ (@NayantharaFanC1) May 27, 2022
ಬಾಲಿವುಡ್ ಸ್ಟಾರ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆಯ ಜವಬ್ದಾರಿ ಹೊತ್ತಿಕೊಂಡಿದ್ದ ವೆಡ್ಡಿಂಗ್ ಪ್ಲಾನರ್ ಟೀಮ್ ಈಗ ನಯನತಾರಾ ಮತ್ತು ವಿಘ್ನೇಶ್ ಜೋಡಿ ಮದುವೆ ಪ್ಲಾನಿಂಗ್‌ಗೆ ಸಾಥ್ ನೀಡಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಜೂನ್ 9ರಂದು ಅದ್ದೂರಿಯಾಗಿ ಈ ಜೋಡಿ ಹಸೆಮಣೆ ಏರಲಿದೆ. ಈಗ ಮದುವೆಯ ಆಮಂತ್ರಣದ ಕುರಿತ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಒಟ್ನಲ್ಲಿ ನೆಚ್ಚಿನ ನಟಿಯ ಮದುವೆಯ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.