ಕಾಲಿವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದ್ರೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ವಿಚಾರ. ಈ ಜೋಡಿ ಈವರೆಗೂ ಮದುವೆಯ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸುದ್ದಿಗೋಷ್ಠಿಯಲ್ಲಿ ವಿಘ್ನೇಶ್ ಶಿವನ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದಕ್ಷಿಣದ ಚಿತ್ರರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಈ ಜೋಡಿಯ ಮದುವೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಘ್ನೇಶ್, ತಾವು ಮತ್ತು ನಯನತಾರಾ ಮದುವೆಯಾಗುತ್ತಿರುವ ಕುರಿತು ಅಧಿಕೃತವಾಗಿ ಹೇಳಿದ್ದಾರೆ.
ʻರೌಡಿ ಧಾನ್ʼ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತು ಮಾತನಾಡಿರುವ ವಿಘ್ನೇಶ್, ಇಲ್ಲಿಯವರೆಗೂ ತಮ್ಮ ಸಿನಿಮಾಗೆ ಮತ್ತು ನಮ್ಮ ಖಾಸಗಿ ಜೀವನಕ್ಕೆ ಬೆಂಬಲಿಸಿದ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಈ ವೇಳೆ, ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್‌ಗೆ ನಿರ್ದೇಶನ ಮಾಡುವ ಕುರಿತು ಅಧಿಕೃತವಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್
ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಜೂನ್ 7 ಮತ್ತು 8ರಂದು ಹಳದಿ ಶಾಸ್ತ್ರ ಮತ್ತು ಮೆಹೆಂದಿ ಶಾಸ್ತ್ರವಿದ್ದು, ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.