ಟಾಲಿವುಡ್‌ನ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ (Jani Master) ಲೈಂಗಿಕ ದೌರ್ಜನ್ಯದ ಆರೋಪವನ್ನ ಹೊತ್ತು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಜಾನಿ ಮಾಸ್ಟರ್ ಜೊತೆಗಿನ ಫೋಟೋವನ್ನ ಹಂಚಿಕೊಂಡಿರುವ ವಿಘ್ನೇಶ್ ತೀವ್ರ ಚರ್ಚೆಗೆ ಕಾರಣವಾಗಿದ್ದಾರೆ. ವಿಘ್ನೇಶ್ (Vignesh Shivan) ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಜಾನಿ ಮಾಸ್ಟರ್ ಕೆಲಸ ಮಾಡುತ್ತಿದ್ದಾರಂತೆ ಹೀಗಾಗಿ ಈ ಫೋಟೋ ನೋಡಿ ಜಾಲತಾಣದಲ್ಲಿ ಸಾಕಷ್ಟು ಕಮೆಂಟ್ಸ್ ಮಾಡ್ತಿದ್ದಾರೆ.
ಸಹಾಯಕ ನೃತ್ಯ ನಿರ್ದೇಶಕಿಯ ಮೇಲೆ ಅತ್ಯಾಚಾರ ಎಸಗಿದ್ದರು ಎನ್ನಲಾದ ಆರೋಪದ ಮೇಲೆ ಜಾನಿ ಮಾಸ್ಟರ್ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರ ಬಂದಿದ್ದಾರೆ. ಅವರ ಜೊತೆಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾಗೆ ನಿರ್ದೇಶಕ ವಿಘ್ನೇಶ್ ಆದ್ರೆ, ನಯನತಾರಾ (Nayanthara) ನಿರ್ಮಾಪಕಿಯಾಗಿದ್ದಾರೆ. ಹೀಗಾಗಿ ಇಬ್ಬರಿಗೂ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಜೊತೆ ಮತ್ತೆ ಸಿಕ್ಕಿಬಿದ್ದ ಶ್ರೀಲೀಲಾ!
ಜಾನಿ ಮಾಸ್ಟರ್ ಕೇವಲ ತೆಲುಗು ಮಾತ್ರವಲ್ಲದೇ ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಯ ಸಿನಿಮಾದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಕನ್ನಡದ ನಟಸಾರ್ವಭೌಮ, ಯುವರತ್ನ, ರಾಜರಥ, ವಿಕ್ರಾಂತ್ ರೋಣ, ಕಬ್ಜ ಸಿನಿಮಾದ ಹಾಡುಗಳಿಗೆ ಅದ್ಭುತ ನೃತ್ಯ ನಿರ್ದೇಶನ ಮಾಡುವ ಮೂಲಕ ಖ್ಯಾತಿ ಪಡೆದಿದ್ದಾರೆ. ಇದನ್ನೂ ಓದಿ: ಕರ್ಣನಿಗೆ ಗ್ರೀನ್ ಸಿಗ್ನಲ್ – ಭವ್ಯಾ, ನಮ್ರತಾ, ಕಿರಣ್ ರಾಜ್ ತ್ರಿವಳಿ ಆಟ
ಜಾನಿ ಮಾಸ್ಟರ್ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯದ ಆರೋಪ ಅವರ ವೃತ್ತಿ ಬದುಕಿಗೆ ಯಾವ ರೀತಿಯಾಗಿ ಡ್ಯಾಮೇಜ್ ಮಾಡುತ್ತಿದೆ ನೋಡಿ. ಅವರ ಜೊತೆಗೆ ಕೆಲಸ ಮಾಡಲು ಮುಂದಾದವರಿಗೂ ಕೂಡಾ ಟೀಕೆಗಳು ಶುರುವಾಗಿವೆ.