CinemaKarnatakaLatestMain PostSandalwoodSouth cinema

ನಯನತಾರಾ ಕೊರಳಲ್ಲಿ ಇನ್ನೂ ಹಳದಿ ದಾರ : ಚಿನ್ನದ ಮಾಂಗಲ್ಯ ಎಲ್ಲಿ ಅಂತ ಕೇಳಿದ ಅಭಿಮಾನಿಗಳು

Advertisements

ಳೆದ ತಿಂಗಳಷ್ಟೇ ಮದುವೆಯಾಗಿರುವ ತಮಿಳಿನ ಖ್ಯಾತ ನಟಿ ನಯನತಾರಾ ಎಷ್ಟು ಸಿಂಪಲ್ ಅನ್ನುವುದಕ್ಕೆ ಅವರ ಕೊರಳಲ್ಲಿರುವ ಹಳದಿ ದಾರವೇ ಸಾಕ್ಷಿಯಾಗಿದೆ. ಮದುವೆಯ ದಿನ ಪತಿ ವಿಘ್ನೇಶ್ ಕಟ್ಟಿರುವ ಹಳದಿ ದಾರದ ಮಾಂಗಲ್ಯವನ್ನು ಹಾಗೆಯೇ ಕೊರಳಲ್ಲಿ ಉಳಿಸಿಕೊಂಡಿದ್ದಾರೆ ನಯನತಾರಾ. ಹಾಗಾಗಿ ಅಭಿಮಾನಿಗಳು ಚಿನ್ನದ ಮಾಂಗಲ್ಯ ಎಲ್ಲಿ ಎಂದು ಕೇಳುತ್ತಿದ್ದಾರೆ.

ನಿನ್ನೆ ನಯನತಾರಾ ಏರ್ ಪೋರ್ಟ್ ನಿಂದ ಆಚೆ ಬರುವಾಗಿ ಅವರ ಕೊರಳಲ್ಲಿರುವ ಹಳದಿ ದಾರವನ್ನು ಗಮನಿಸಿರುವ ಅಭಿಮಾನಿಗಳು ಅದನ್ನು ಫೋಟೋ ತಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನಮ್ ನಟಿ ಎಷ್ಟು ಸಿಂಪಲ್ ನೋಡಿ ಎಂದು ಟ್ಯಾಗ್ ಲೈನ್ ಬೇರೆ ಕೊಟ್ಟಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

ನಯನತಾರಾ ಮತ್ತು ವಿಘ್ನೇಶ್ ಅಷ್ಟೇ ಸಿಂಪಲ್ ಆಗಿಯೇ ಮದುವೆಯಾದರೆ, ಆಡಂಬರಕ್ಕೆ ಆಸ್ಪದ ಕೊಡದೇ ಕೆಲವೇ ಕೆಲವು ಸಿಲಿಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂದಿದ್ದ ಜೋಡಿ ಕೊನೆಗೆ ಸಪ್ತಪದಿ ತುಳಿದದ್ದು ರೆಸಾರ್ಟ್ ನಲ್ಲಿ. ಹಾಗಾಗಿ ನಯನತಾರಾ ಯಾವಾಗಲೂ ಸಿಂಪಲ್ ಎನ್ನುವ ಮಾತು ಕೇಳಿ ಬಂದಿದೆ. ಮದುವೆಯ ನಂತರ ಸದ್ಯ ಈಗವರು ಶಾರುಖ್ ಖಾನ್ ನಟನೆಯ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button