ಬೆಂಗಳೂರು: ಬೆಂಕಿ ಅವಘಡ (Fire accident) ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಾಯಂಡಹಳ್ಳಿಯ (Nayandahalli) ಪ್ರಮೋದ್ ಲೇಔಟ್ ಬಳಿಯ ಪ್ಲಾಸ್ಟಿಕ್ ಗೊಡಾನ್‍ನಲ್ಲಿ ಸಂಭವಿಸಿದೆ.
ರಾತ್ರಿ ಸಮಯದಲ್ಲಿ ಬೆಂಕಿ ಗೊಡಾನ್‍ಗೆ ತಗಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂರು ಎಕರೆ ಇರುವ ಪ್ಲಾಸ್ಟಿಕ್ ಗೊಡಾನ್ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ದಟ್ಟ ಹೊಗೆ ಆವರಿಸಿದೆ. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು (Fire Department) ಆಗಮಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿವೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ
Advertisement
Advertisement
ಗೊಡಾನ್‍ನಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು ಹಾಗೂ ನಾಲ್ಕಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಸುಟ್ಟು ಹೋಗಿದ್ದು, 50 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Advertisement
ಗೊಡಾನ್‍ನ ಕಾರ್ಮಿಕರು ಅಲ್ಲೇ ನಿದ್ರೆಗೆ ಜಾರಿದ್ದು, ಬೆಂಕಿ ಹೊತ್ತಿಕೊಂಡಿದ್ದು ಗಮನಕ್ಕೆ ಬಂದಿಲ್ಲ. ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಬಿಬಿಎಂಪಿ ಮಾರ್ಷಲ್‍ಗಳು ಹೋಗಿ ಕಾರ್ಮಿಕರನ್ನು ಎಚ್ಚರಿಸಿದ್ದಾರೆ. ಒಳಗಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಹೊರಗೆ ಹಾಕಿಸಿ ಅನಾಹುತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ.
Advertisement
ಈ ಹಿಂದೆ ಸ್ಥಳೀಯರು ಗೊಡಾನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಅನುಮತಿ ನೀಡಿದ್ದ ಬಿಬಿಎಂಪಿ ವಿರುದ್ಧ ಮತ್ತೆ ಜನ ತಿರುಗಿ ಬಿದ್ದಿದ್ದಾರೆ. ಸ್ಥಳಕ್ಕೆ ಬ್ಯಾಟರಾಯನಪುರ (Byatarayanapura) ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಾರು, ಬೈಕ್‌ಗೆ ಡಿಕ್ಕಿ – ಸವಾರ ಆಸ್ಪತ್ರೆ ದಾಖಲು