ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

Public TV
1 Min Read
NAYANATARA 1

ಸಿಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಇದೀಗ ಪತಿ ವಿಘ್ನೇಶ್ ಶಿವನ್ ಮನೆಯಲ್ಲಿದ್ದಾರೆ. ಪತಿಯ ಮನೆಗೆ ಬಂದಿದ್ದೇನೆ ಎಂದು ಅವರು ಫೋಟೋವೊಂದನ್ನು ಶೇರ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆಯಾದ ನಂತರ ಪತಿ ಮನೆಗೆ ಹೋಗುವುದು ಕಾಮನ್ ಆಗಿದ್ದರೂ, ಮದುವೆ ನಂತರದ ಸಂಪ್ರದಾಯವನ್ನು ಅವರು ಪಾಲಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

nayanatara

ಮದುವೆಯ ಮರುದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಈ ಜೋಡಿ, ಆನಂತರ ಮಾಧ್ಯಮಗಳ ಮುಂದೆ ಬಂದು, ಮದುವೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ, ತಿರುಪತಿಯಲ್ಲಿ ನಡೆದ ಘಟನೆಗೆ ಈಗಾಗಲೇ ಅವರು ಕ್ಷಮೆ ಕೂಡ ಕೇಳಿದ್ದಾರೆ. ತಿರುಪತಿ ಆಡಳಿತ ಮಂಡಳಿ ನೋಟಿಸ್ ಕಳುಹಿಸುವ ವಿಚಾರದ ಕುರಿತು ಮಾತನಾಡಿರುವ ವಿಘ್ನೇಶ್ ಶಿವನ್. ಆಗಲೇ ಕ್ಷಮೆ ಕೇಳಿದ್ದೇವೆ. ಇನ್ನೂ ನೋಟಿಸ್ ಬಂದಿಲ್ಲ. ಬಂದರೆ, ಆಡಳಿತ ಮಂಡಳಿ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

NAYANATARA 2

ಸತತ ಆರೇಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್, ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಅಷ್ಟೂ ವರ್ಷಗಳ ಕಾಲ ಪ್ರೀತಿಯನ್ನು ಕಾಪಿಟ್ಟುಕೊಂಡು ಇದೀಗ ಸತಿಪತಿಗಳಾಗಿದ್ದಾರೆ. ಅದ್ಧೂರಿಯಾಗಿಯೇ ಮದುವೆ ಆಗಿದ್ದಾರೆ. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಈ ಜೋಡಿಯ ಮದುವೆಗೆ ಹಾಜರಿದ್ದು ಶುಭ ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *