ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್

Public TV
1 Min Read
naxals visit chikmagaluru sringeri anti naxal force launch combing operation

ಚಿಕ್ಕಮಗಳೂರು: ಕೊಪ್ಪದ (Koppa) ಕಾಡಂಚಿನ ಗ್ರಾಮದಲ್ಲಿ ನಕ್ಸಲರು ಭೇಟಿ ನೀಡಿದ್ದ ಮನೆಗೆ ಎಎನ್‍ಎಫ್ (Anti-Naxal Force) ತಂಡ ತೆರಳಿ ಮಾಹಿತಿ ಕಲೆಹಾಕಿದೆ.

ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬವರ ಮನೆಗೆ ನಕ್ಸಲರು ಭೇಟಿ ನೀಡಿದ್ದರು. ಈ ವೇಳೆ ಗನ್ ತೋರಿಸಿ ಬೆದರಿಸಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ ಹೋಗಿದ್ದರು. ಈ ವಿಚಾರ ತಿಳಿದ ಪೊಲೀಸರು (Police) ಹಾಗೂ ಎಎನ್‍ಎಫ್ ತಂಡ ಮನೆಗೆ ತೆರಳಿ ಪರಿಶೀಲನೆ ನಡೆಸಿದೆ.

ಕೊಪ್ಪ ಡಿವೈಎಸ್‍ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಎಷ್ಟು ಜನ ಬಂದಿದ್ದರು? ಅವರ ಬಳಿ ಏನೇನಿತ್ತು? ಏನು ಮಾತಾಡಿದ್ದಾರೆ. ಅಡುಗೆ ಏನು ಮಾಡಿದ್ರಿ, ಎಷ್ಟು ಜನಕ್ಕೆ ಮಾಡಿಕೊಟ್ಟಿದ್ದೀರಿ? ಎಂದು ವಿಚಾರಿಸಲಾಗಿದೆ.

ಊಟ ಮಾಡಿ ಹೋಗುವಾಗ ಪೊಲೀಸರು ಬರುತ್ತಾರೆ ಎಂದು ನಕ್ಸಲರು ಗನ್ ಬಿಟ್ಟು ಹೋಗಿದ್ದಾರೆ. ನಕ್ಸಲರು ಹೋದ ಮಾರ್ಗದಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಪ್ಪ ತಾಲೂಕಿನ ಅರಣ್ಯ ಭಾಗಗಳಲ್ಲಿ ಪೊಲೀಸರು ಹಾಗೂ ಎಎನ್‍ಎಫ್ ತಂಡ ಹೈ ಅಲರ್ಟ್ ಆಗಿದೆ.

Share This Article