ಬೆಂಗಳೂರು: ನಕ್ಸಲರು (Naxalites) ಶರಣಾಗತಿಯಾಗಲೂ ನಾನೇ ಕರೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು. ಈ ವೇಳೆ ನಕ್ಸಲರು ಶರಣಾಗತಿಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ನಕ್ಸಲರು ಶರಣಾಗಬೇಕು ಎಂದು ನಾನೇ ಕರೆ ಕೊಟ್ಡಿದ್ದೆ. ಮುಖ್ಯವಾಹಿನಿಗೆ ಬರುವಂತೆ ನಾನೇ ಕರೆ ಕೊಟ್ಟಿದ್ದೆ. ಅವರು ಶರಣಾಗೋ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರ ಮನಸ್ಸು ಪರಿವರ್ತನೆ ಆಗಬಹುದು ಎಂದು ಅಂದುಕೊಂಡಿದ್ದೇನೆ. ಈ ಮೂಲಕ ನಕ್ಸಲರು ಶರಣಾಗತಿಯನ್ನ ಪರೋಕ್ಷವಾಗಿ ಅವರು ಸ್ವಾಗತಿಸಿದ್ದಾರೆ.