220 ಕೇಸ್‌ಗಳಲ್ಲಿ ಬೇಕಾಗಿದ್ದ ನಕ್ಸಲ್‌ ದಂಪತಿ ಪೊಲೀಸರ ಮುಂದೆ ಶರಣಾಗತಿ

Public TV
1 Min Read
naxal couple maharashtra

– ಶಸ್ತ್ರಾಸ್ತ್ರ ತ್ಯಜಿಸಿದ ನಕ್ಸಲ್‌ ದಂಪತಿಗೆ ರಾಜ್ಯ, ಕೇಂದ್ರ ಸರ್ಕಾರದಿಂದ 23 ಲಕ್ಷ

ಮುಂಬೈ: 220 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ದಂಪತಿ (Naxal Couple) ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಗಿರಿಧರ್ ಎಂದೂ ಕರೆಯಲ್ಪಡುವ ನಕ್ಸಲೈಟ್ ನಂಗ್ಸು ತುಮ್ರೆಟಿ ತನ್ನ ಪತ್ನಿ ಸಂಗೀತಾ ಉಸೇಂಡಿ ಅಲಿಯಾಸ್ ಲಲಿತಾಳೊಂದಿಗೆ ಮಹಾರಾಷ್ಟ್ರದ (Maharashtra) ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಶರಣಾದರು. ಇದನ್ನೂ ಓದಿ: ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ

Devendra Fadnavis 2

ಗಿರಿಧರ್ ವಿರುದ್ಧ 170ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಆತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ಪತ್ನಿ ವಿರುದ್ಧ 17 ಪ್ರಕರಣಗಳಿದ್ದು, ಆಕೆ ತಲೆಗೆ 16 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈಗ ಇಬ್ಬರೂ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ.

ಗಿರಿಧರ್ 1996 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಎಡಪಲ್ಲಿ ದಳಕ್ಕೆ ಸೇರಿದ್ದ. ಗಡ್ಚಿರೋಲಿಯಲ್ಲಿ ಅದರ ಚಟುವಟಿಕೆಗಳ ಮುಖ್ಯಸ್ಥನಾಗಿದ್ದ. ಈತನ ವಿರುದ್ಧ 86 ಎನ್‌ಕೌಂಟರ್‌ಗಳು ಮತ್ತು 15 ಬೆಂಕಿ ಹಚ್ಚುವಿಕೆ ಸೇರಿದಂತೆ 179 ಪ್ರಕರಣಗಳಿವೆ. ಆತನ ಪತ್ನಿ ಲಲಿತಾ ಕೂಡ 17 ಪ್ರಕರಣಗಳನ್ನು ಎದುರಿಸುತ್ತಿದ್ದಾಳೆ. ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗಿರಿಧರ್‌ಗೆ 15 ಲಕ್ಷ ರೂ. ಮತ್ತು ಲಲಿತಾಗೆ 8.50 ಲಕ್ಷ ರೂ. ನೀಡಲಾಗಿದೆ. ಇದನ್ನೂ ಓದಿ: ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ- ನಾಲ್ವರ ದುರ್ಮರಣ

ಗಿರಿಧರ್ ಶರಣಾಗತಿಯಿಂದ ಗಡ್ಚಿರೋಲಿಯಲ್ಲಿ ಮಾವೋವಾದಿ ಚಳವಳಿಯ ಬೆನ್ನೆಲುಬು ಮುರಿದಿದೆ. ನಕ್ಸಲ್ ಹಾವಳಿಯನ್ನು ಕೊನೆಗೊಳಿಸಲು ಗಡ್ಚಿರೋಲಿ ಪೊಲೀಸರ ಅವಿರತ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ದೇವೇಂದ್ರ ಫಡ್ನವಿಸ್‌ ಎಂದು ತಿಳಿಸಿದ್ದಾರೆ.

Share This Article