– ಜುಲ್ಫಿಕರ್, ಶ್ರೀಧರ್ ಮೇಲೆ ಖಾಕಿ ಕಣ್ಣು
ಚಿಕ್ಕಮಗಳೂರು: ಇತ್ತೀಚಿಗೆ ರಾಜ್ಯದ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿದೆ ಎಂದು ಸರ್ಕಾರ ಭಾವಿಸಿತ್ತು. ಆದ್ರೆ, ಇದೀಗ ನಕ್ಸಲರು ನಗರ ಪ್ರದೇಶಗಳಲ್ಲಿಯೇ ಸಂಘಟನೆ ಮಾಡ್ತಿದ್ದಾರೆ ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದರಿಂದ ಈಗ ಶರಣಾಗಿರುವ ನಕ್ಸಲರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿರಿಸಿದೆ.
Advertisement
ಇಷ್ಟು ದಿನ ಕಾಡೊಳಗೆ ಬಂದೂಕು ಹಿಡಿದು ಹೋರಾಟ ಮಾಡ್ತಿದ್ದ ನಕ್ಸಲರು ಇದೀಗ ಹೋರಾಟದ ದಿಕ್ಕನ್ನ ಬದಲಾಯಿಸಿದ್ದಾರೆ. ಕಾಡಲ್ಲಿದ್ದು ಹೋರಾಟ ಮಾಡೋಕೆ ಸ್ಥಳೀಯರ ಸಹಕಾರ ಅಗತ್ಯ ಆದ್ರೆ ಸ್ಥಳೀಯರು ಹೋರಾಟಕ್ಕೆ ಬೆಂಬಲ ನೀಡಲ್ಲ. ಅದಕ್ಕಾಗಿ ನಾಡಲ್ಲಿದ್ದು ಹೇಗೆ ಸಂಘಟನೆ, ಹೋರಾಟ ಬಲಪಡಿಸ್ಬೇಕು ಅಂತ ಪ್ಲಾನ್ ಮಾಡ್ತಿದ್ದಾರಂತೆ.
Advertisement
Advertisement
ಈ ಹಿಂದೆ ಶರಣಾಗಿದ್ದ ನಕ್ಸಲರಾದ ನೂರ್ ಜುಲ್ಫಿಕರ್, ಶ್ರೀಧರ್ ಮುಖ್ಯವಾಹಿನಿಗೆ ಬಂದ್ಮೇಲೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಹೋರಾಟ ಮಾಡ್ತಿದ್ದಾರೆ. ಇವರ ಸಂಘಟನೆ ಮೇಲೂ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಜೊತೆಗೆ ಜಾಮೀನು ರದ್ದುಪಡಿಸುವಂತೆ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಅಂತಾ ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಹೇಳಿದ್ದಾರೆ.
Advertisement
`ಅರ್ಬನ್ ಆ್ಯಕ್ಷನ್ ಟೀಂ’ ಹೆಸರಿನಲ್ಲಿ ನಕ್ಸಲರು ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲವರು ಭೂಮಿ ಹೋರಾಟ ಸಮಿತಿ ಅಂತಾ ಹೇಳಿಕೊಂಡು ಸಂಘಟನೆಗಳನ್ನು ನಡೆಸುತ್ತಾ ಇದ್ದಾರೆ. ತೆರೆಮರೆಯಲ್ಲಿ ನಡೆಸ್ತಿದ್ದ ಹೋರಾಟ ನಾಡಿನಲ್ಲಿ ಶುರುವಾಗುತ್ತಾ ಅನ್ನೋ ಆತಂಕ ಹೆಚ್ಚಾಗಿದೆ.