– ವಿಕ್ರಂ ಗೌಡ ಕಾಡಿನಿಂದ ಬಂದ ದಾರಿ ಯಾವುದು?
– ಎನ್‌ಕೌಂಟರ್ ನಡೆದ ಪೀತಬೈಲು.. ತಿಂಗಳಮಕ್ಕಿ ಸ್ಥಳದ ಚಿತ್ರಣ
ಉಡುಪಿ: ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾದ ಪೀತಬೈಲು ತಿಂಗಳ ಮಕ್ಕಿಯ ಎನ್ಕೌಂಟರ್ ಸ್ಪಾಟ್‌ಗೆ ನಿಮ್ಮ ‘ಪಬ್ಲಿಕ್ ಟಿವಿ’ ತಲುಪಿದೆ. ಸ್ಥಳದಲ್ಲಿ ಎನ್‌ಕೌಂಟರ್ ನಡೆದಿರುವ ಬಗ್ಗೆ ಇರುವ ಕುರುಹುಗಳ ಬಗ್ಗೆ ಮಾಹಿತಿ ನೀಡಿದೆ.
ಎಫ್‌ಎಸ್‌ಎಲ್ ತಂಡ ಸಂಪೂರ್ಣ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ಎಲ್ಲಾ ಪ್ರೊಸೀಜರ್‌ಗಳನ್ನು ಮುಗಿಸಿದ್ದಾರೆ. ಜಯಂತ್‌ಗೌಡ ಕುಟುಂಬ ಇನ್ನು ಮನೆಗೆ ವಾಪಸ್ ಆಗಿಲ್ಲ. ಎನ್ಕೌಂಟರ್ ನಡೆದದ್ದು ಹೇಗೆ? ಜಯಂತ್ ಗೌಡ ಮನೆಯ ಚಿತ್ರಣ ಇಲ್ಲಿದೆ.
ನಕ್ಸಲ್ ವಿಕ್ರಂ ಗೌಡ ಮತ್ತು ಎಎನ್‌ಎಫ್ ಪೊಲೀಸರ ನಡುವೆ ಒಂದು ದೊಡ್ಡ ಗುಂಡಿನ ಚಕಮಕಿ ನಡೆದಿದೆ. ಮನೆಯ ಸುತ್ತಲೂ ಮನೆಯೊಳಗೂ ಶಸ್ತ್ರಸಜ್ಜಿತ ನಕ್ಸಲ್ ನಿಗ್ರಹ ದಳದ ಪೊಲೀಸರು ಸಜ್ಜಾಗಿದ್ದರು.
ಮನೆಯ ಒಳಗೆ ಬಂದ ನಕ್ಸಲ್ ನಾಯಕ ವಿಕ್ರಂ ಗೌಡನ ಮೇಲೆ ಅವಿತು ಕುಳಿತಿದ್ದ ಪೊಲೀಸರ ತಂಡ ಅಕ್ಷರಶಃ ಗುಂಡಿನ ಸುರಿಮಳೆ ಸುರಿಸಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮನೆಯ ಸುತ್ತಮುತ್ತ ತೋಟ ಅಂಗಳದಲ್ಲಿ ಗುಂಡು ಸಿಡಿದ ಗುರುತುಗಳು ಲಭ್ಯವಾಗಿದೆ. ಅಂಗಳ ತೋಟ ಗದ್ದೆಗಳಲ್ಲಿ ಪೊಲೀಸರ ಪಿಸ್ತೂಲಿನಿಂದ ಸಿಡಿದ ಮದ್ದು ಗುಂಡುಗಳ ಕುರುಹು ಕಾಣಿಸಿದೆ.
ತೋಟದ ಅಡಿಕೆ ಮರವೊಂದರಲ್ಲಿ ಪೊಲೀಸರು ಹಾರಿಸಿರುವ ಗುಂಡು ಸಿಲುಕಿರುವುದು ಕೂಡ ಸಿಕ್ಕಿದೆ. ಸ್ಥಳದಲ್ಲಿ ಸಿಕ್ಕ ಎಲ್ಲಾ ಕುರುಹುಗಳನ್ನು ಎಫ್‌ಎಸ್‌ಎಲ್ ತಂಡ ಸಂಗ್ರಹಿಸಿದೆ.