– ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಯಲಿದೆ ಸಂಪೂರ್ಣ ಮಹಜರು; ಬುಧವಾರ ವಿಕ್ರಂ ಗೌಡ ಅಂತ್ಯಸಂಸ್ಕಾರ
– ನಕ್ಸಲ್ ತಂಡ ರೇಷನ್ ತೆಗೆದುಕೊಳ್ಳಲು ಬಂದಿದ್ದಾಗ ಪೊಲೀಸರಿಂದ ದಾಳಿ
ಉಡುಪಿ: ನಕ್ಸಲ್ ನಿಗ್ರಹದಳದ ಗುಂಡಿಗೆ ಬಲಿಯಾದ ವಿಕ್ರಂ ಗೌಡ ಮೃತದೇಹ ಘಟನಾ ಸ್ಥಳದಿಂದ ಮಣಿಪಾಲಕ್ಕೆ ಶಿಫ್ಟ್ ಆಗಿದೆ. ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
Advertisement
ನ್ಯಾಯಾಧೀಶರ ಸಮ್ಮುಖದಲ್ಲಿ ಇಂಕ್ವೆಸ್ಟ್ ನಡೆಯಲಿದೆ. ನಾಳೆ ವಿಕ್ರಂ ಗೌಡ ಅಂತ್ಯಸಂಸ್ಕಾರ ಕುಟುಂಬ ನಡೆಸಲಿದೆ.
Advertisement
ವಿಕ್ರಂ ಗೌಡ ಕುಟುಂಬವನ್ನು ಪೊಲೀಸರು ಸಂಪರ್ಕಿಸಿದ್ದಾರೆ. ನಾಳೆ ವಿಕ್ರಂ ಗೌಡ ಸಹೋದರನಿಗೆ ಶವ ಹಸ್ತಾಂತರಿಸುವ ಸಾಧ್ಯತೆ ಇದೆ. ಅಂತ್ಯಸಂಸ್ಕಾರ ಎಲ್ಲಿ ನಡೆಸುವುದೆಂದು ನಿಗದಿಯಾಗಿಲ್ಲ. 21 ವರ್ಷಗಳಿಂದ ಮನೆಯವರೊಂದಿಗೆ ಸಂಪರ್ಕದಲ್ಲಿ ವಿಕ್ರಂ ಗೌಡ ಇರಲಿಲ್ಲ. ಆರಂಭದಲ್ಲಿ ಶವ ಪಡೆಯಲು ಕುಟುಂಬಸ್ಥರು ಹಿಂದೇಟು ಹಾಕಿದರು. ಪೊಲೀಸ್ ಇಲಾಖೆ ಮನವೊಲಿಸಿದ ಬಳಿಕ ಶವ ಪಡೆಯಲು ನಿರ್ಧರಿಸಿದ್ದಾರೆ.
Advertisement
ಸೋಮವಾರ ಸಂಜೆ 6.15- 6.30 ನಡುವೆ ನಡೆದಿರುವ ನಕ್ಸಲ್ ಎನ್‌ಕೌಂಟರ್ ಪೀತಬೈಲಿನಲ್ಲಿ ಪ್ರೀತಂ ಗೌಡನ ಮೂವರು ಸಹೋದರರಾದ ನಾರಾಯಣ, ಜಯಂತ, ಸುಧಾಕರ ಮನೆಯಿದೆ. ನ.11 ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲರ ತಂಡ ಹೇಳಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ತಿಳಿಸಿತ್ತು.
Advertisement
ಈ ಬಗ್ಗೆ ಎಎನ್‌ಎಫ್ ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಬಳಿಕ ಜಯಂತ್ ಗೌಡ ಮನೆಯಲ್ಲಿ ಕುಳಿತಿದ್ದರು. ರೇಷನ್ ಪಡೆಯಲು ಬರುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಜಯಂತ್ ಗೌಡ ಮನೆಯ ಹೊಸ್ತಿಲಲ್ಲಿ ಕುಸಿದು ಬಿದ್ದು ಪ್ರೀತಂ ಗೌಡ ಪ್ರಾಣ ಬಿಟ್ಟಿದ್ದಾನೆ.