ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿ ಪೊಲೀಸ್ (Pavagada Police) ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ನಕ್ಸಲ್ ಕೋಮುಲು ಮುತ್ಯಾಲ ಚಂದ್ರುನನ್ನು ಬೆಂಗಳೂರು ಪೊಲೀಸರು (Bengaluru Police ) ಬಂಧಿಸಿದ್ದಾರೆ.
ಬಂಧಿತ ಆರೋಪಿ ಆಂಧ್ರಪ್ರದೇಶದ ಗಾರಲದಿನ್ನೆ ಕೇಶವಪುರದ ನಿವಾಸಿಯಾಗಿದ್ದಾನೆ. ಹತ್ಯಾಕಾಂಡದ ಬಳಿಕ 9 ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ. ಈತ ಪೊಲೀಸ್ ಹತ್ಯಾಕಾಂಡದಲ್ಲಿ ಭಾಗಿದ್ದ 75ನೇ ಆರೋಪಿಯಾಗಿದ್ದಾನೆ. ಆತನನ್ನು ಪಾವಗಡದ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಇದನ್ನೂ ಓದಿ: ದರ್ಶನ್ ಪ್ರಕರಣದ ಕುರಿತು ನಟಿ ಮಯೂರಿ ರಿಯಾಕ್ಷನ್
Advertisement
Advertisement
2005ರ ಫೆ.11 ರ ರಾತ್ರಿ 10:30ರ ವೇಳೆಗೆ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆದಿತ್ತು. ಏಕಾಏಕಿ 300 ಜನರ ದಾಳಿಗೆ 7 ಮಂದಿ ಪೊಲೀಸರು ಹಾಗೂ ಓರ್ವ ಬಸ್ ಕ್ಲಿನರ್ ಮೃತಪಟ್ಟಿದ್ದರು. ಕೋಮುಲು ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತಿದ್ದ. ಇದನ್ನೂ ಓದಿ: ಹತ್ರಾಸ್ ದುರಂತ- ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್