‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೊದಲ ಬಾರಿಗೆ ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸುತ್ತಿದ್ದಾರೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಚಿತ್ರದ ಕಥೆ ಒಳಗೊಂಡಿದೆ. ಈ ಚಿತ್ರಕ್ಕೆ ಸದ್ಯ ತಂಬಾ ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದಲ್ಲಿ ಆಯುಷ್ಮಾನ್ ಮತ್ತು ರಶ್ಮಿಕಾಗೆ ನವಾಜುದ್ದೀನ್ ಸಿದ್ಧಿಕಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಪುಷ್ಪ 3’ ಬರೋದು ಖಚಿತ ಎಂದ ನಿರ್ಮಾಪಕ ರವಿಶಂಕರ್
ಈಗಾಗಲೇ ಬದ್ಲಾಪುರ, ಕಿಕ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ನವಾಜುದ್ದೀನ್ ಈ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ರೆ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ನಟನ ಜೊತೆ ಕೂಡ ಒಂದು ಮಾತುಕತೆ ಕೂಡ ಮಾಡಿದೆಯಂತೆ. ಇದು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.
ಇನ್ನೂ ‘ತಂಬಾ’ (Thamba) ಚಿತ್ರದ ಶೂಟಿಂಗ್ ಈ ವರ್ಷದ ಅಂತ್ಯದಲ್ಲಿ ಶುರುವಾಗಲಿದೆ. ಮುಂಬೈ ಮಾತ್ರವಲ್ಲ, ಕರ್ನಾಟಕದ ಹಂಪಿಯಲ್ಲೂ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಇನ್ನೂ ರಶ್ಮಿಕಾ ಸದ್ಯ ನಟಿಸಿರುವ ‘ಪುಷ್ಪ 2’ ಮತ್ತು ‘ಛಾವಾ’ ಎರಡು ಚಿತ್ರಗಳು ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿದೆ. ಶ್ರೀವಲ್ಲಿ ನಟನೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.