ನವದೆಹಲಿ: ಉತ್ತರ ಕೊರಿಯಾ ಹಾಗೂ ಅಮೆರಿಕ ಪರಸ್ಪರ ಮಾತುಕತೆ ನಡೆಸಿದಂತೆ ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಲಿ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ರ ಸಹೋದರ ಶಹಬಾಜ್ ಶರೀಫ್ ಹೇಳಿದ್ದಾರೆ.
ಏಳು ದಶಕಗಳ ವೈರತ್ವವನ್ನು ಬದಿಗೊತ್ತಿ ಅಮೆರಿಕ-ಉತ್ತರ ಕೊರಿಯಾ ಪರಸ್ಪರ ಮಾತುಕತೆಗೆ ಬಂದಿವೆ. ಹಲವು ವರ್ಷಗಳ ಕಾಲ ತಮ್ಮ ಶಕ್ತಿ ಪ್ರದರ್ಶನಗಳಲ್ಲಿಯೇ ನಿಂತರೂ ಸದ್ಯ ಎರಡು ರಾಷ್ಟ್ರಗಳು ಚರ್ಚೆ ನಡೆಸಿದ ಮಾದರಿಯಲ್ಲೇ ಭಾರತ ಹಾಗೂ ಪಾಕಿಸ್ತಾನ ಯಾಕೆ ಮಾತುಕತೆ ನಡೆಸಬಾರದು ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Advertisement
Singapore Summit between USA & North Korea should set a good precedent for Pakistan & India to follow. Ever since the start of Korean War, the two nations have been at odds with one another; both threatening to use military force with their nuclear arsenals facing each other(1/3)
— Shehbaz Sharif (@CMShehbaz) June 12, 2018
Advertisement
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಹಬಾಜ್ ಶರೀಫ್, ಮತ್ತೊಮ್ಮೆ ಭಾರತವನ್ನು ಗುರಿ ಮಾಡಿರುವ ಅವರು ಭಾರತ ಜಮ್ಮು ಕಾಶ್ಮೀರ ಪ್ರದೇಶ ಮೇಲೆ ಆಕ್ರಮಣ ಮಾಡಿದೆ. ಇದನ್ನ ಕಾಶ್ಮೀರದ ಜನರು ವಿರೋಧಿಸಿದ್ದಾರೆ ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Advertisement
ಕಾಶ್ಮೀರ ಭಾಗದಲ್ಲಿ ಶಾಂತಿ ಕಾಪಾಡುವುದು ಅಗತ್ಯವಾಗಿದ್ದು, ಜಗತ್ತಿನ ಸಮುದಾಯವು ಇನ್ನು ಗಮನಿಸಬೇಕಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಒಳಪಟ್ಟಂತೇ ಹಲವು ವರ್ಷಗಳಿಂದ ಇರುವ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿಯಮಗಳಂತೆ ಬಗೆಹರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?
Advertisement
If the United States and North Korea can return from the brink of a nuclear flashpoint, there is no reason why Pakistan and India cannot do the same, beginning with a dialogue on Kashmir whose heroic people have resisted and rejected Indian occupation. (2/3)
— Shehbaz Sharif (@CMShehbaz) June 12, 2018
It's time for comprehensive peace talks in our region. International community must focus on the peace process in Afghanistan. Dialogue b/w Pakistan & India over Kashmir should also resume, so that the long-festering Kashmir dispute is resolved in accordance with UN resolutions.
— Shehbaz Sharif (@CMShehbaz) June 12, 2018