ಪನೀರ್ ಶತಮಾನಗಳಿಂದಲೂ ಭಾರತದ ರಾಜಮನೆತನದವರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಹಾಲಿನಿಂದ ತಯಾರಿಸುವ ಪನೀರ್ ಅನ್ನು ಭಾರತೀಯ ಚೀಸ್ ಎಂತಲೂ ಕರೆಯುತ್ತಾರೆ. ನಾವಿಂದು ಹೇಳಿಕೊಡುತ್ತಿರುವ ನವಾಬಿ ಪನೀರ್ ಅನ್ನು ತಯಾರಿಸುವುದು ಸರಳ ಮಾತ್ರವಲ್ಲದೇ ರುಚಿಕರವೂ ಹೌದು. ಗೋಡಂಬಿಯ ಗ್ರೇವಿ ಶ್ರೀಮಂತ ಮನೆತನದ ಆಹಾರದ ಸ್ವಾದ ನೀಡುತ್ತದೆ. ಪರೋಟಾ, ಚಪಾತಿ ಅಥವಾ ಅನ್ನದೊಂದಿಗೆ ಸವಿಯಬಹುದಾದ ನವಾಬಿ ಪನೀರ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಹೆಚ್ಚಿದ ಈರುಳ್ಳಿ – ಮುಕ್ಕಾಲು ಕಪ್
ಹೆಚ್ಚಿದ ಹಸಿರು ಮೆಣಸಿನಕಾಯಿ – 4
ಬೆಳ್ಳುಳ್ಳಿ – 6
ಶುಂಠಿ – ಅರ್ಧ ಇಂಚು
ಸಿಪ್ಪೆ ತೆಗೆದ ಬಾದಾಮಿ – 8
ಗಸೆಗಸೆ – 1 ಟೀಸ್ಪೂನ್
ತುಪ್ಪ – 4 ಟೀಸ್ಪೂನ್
ಪನೀರ್ – ಒಂದೂವರೆ ಕಪ್
ದಾಲ್ಚಿನ್ನಿ ಎಲೆ – 1
ದಾಲ್ಚಿನ್ನಿ ಚಕ್ಕೆ – 1 ಇಂಚು
ಏಲಕ್ಕಿ – 2
ಲವಂಗ – 3
ಜೀರಿಗೆ – ಅರ್ಧ ಟೀಸ್ಪೂನ್
ಮೊಸರು – ಕಾಲು ಕಪ್
ಹಾಲು – 1 ಕಪ್
ಕೇಸರಿ ಎಸಳು – ಕೆಲವು
ಬೆಚ್ಚನೆಯ ಹಾಲು – 2 ಟೀಸ್ಪೂನ್
ಫ್ರೆಶ್ ಕ್ರೀಮ್ – 2 ಟೀಸ್ಪೂನ್
ಕರಿ ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಕಸೂರಿ ಮೇಥಿ – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಜೈಪುರದ ವಿಶಿಷ್ಟ ಉಪಹಾರ – ಮಿರ್ಚಿ ವಡಾ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.
* ಆಳವಾದ ಪ್ಯಾನ್‌ನಲ್ಲಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಬಾದಾಮಿ, ಗೋಡಂಬಿ, ಗಸಗಸೆ ಮತ್ತು 1 ಕಪ್ ನೀರನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.
* ಬಳಿಕ ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
* ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನಯವಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ.
* ಒಂದು ಅಗಲವಾದ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಪನೀರ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಅವುಗಳನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಬಳಿಕ ಪಕ್ಕಕ್ಕೆ ಇಡಿ.
* ಆಳವಾದ ಬಾಣಲೆಯಲ್ಲಿ ಉಳಿದ ತುಪ್ಪವನ್ನು ಬಿಸಿ ಮಾಡಿ, ದಾಲ್ಚಿನ್ನಿ ಎಲೆ, ದಾಲ್ಚಿನ್ನಿ ಚಕ್ಕೆ, ಏಲಕ್ಕಿ, ಲವಂಗ, ಜೀರಿಗೆ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
* ತಯಾರಿಸಿಟ್ಟಿದ್ದ ಪೇಸ್ಟ್, ಮೊಸರು ಸೇರಿಸಿ ಮತ್ತು ಆಗಾಗ ಕೈಯಾಡಿಸುತ್ತಾ 3-4 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಹಾಲು, ಕೇಸರಿ ಹಾಲಿನ ಮಿಶ್ರಣ, ಫ್ರೆಶ್ ಕ್ರೀಮ್, ಕರಿ ಮೆಣಸಿನ ಪುಡಿ ಮತ್ತು ಕಸೂರಿ ಮೇಥಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಈಗ ಹುರಿದ ಪನೀರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಆಗಾಗ ಕೈಯಾಡಿಸುತ್ತಾ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಇದೀಗ ನವಾಬಿ ಪನೀರ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ