ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ)ಯಿಂದ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಕಸ್ಟಡಿ ಅವಧಿ ಮಾರ್ಚ್ 7ರವರೆಗೆ ವಿಸ್ತರಣೆಗಾಗಿದೆ.
Advertisement
ಅಕ್ರಮ ಹಣ ವರ್ಗಾವಣೆ, ಹವಾಲ ಡೀಲ್ ಸೇರಿದಂತೆ ಇತರ ಆರೋಪದಿಂದ ಬಂಧನಕ್ಕೊಳಗಾಗಿರುವ ನವಾಬ್ ಮಲಿಕ್ ಜಾಮೀನಿಗಾಗಿ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ರಾಹುಲ್ ರೊಕ್ಡೆ ನೇತೃತ್ವದ ನ್ಯಾಯಪೀಠ, ಪ್ರಸ್ತುತ ಆರೋಪಿ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆಯನ್ನು ಈವರೆಗೆ ಇಡಿ ಪಡೆದುಕೊಂಡಿಲ್ಲ. ಹಾಗಾಗಿ ವಿಚಾರಣೆಗಾಗಿ ನವಾಬ್ ಮಲಿಕ್ ಇಡಿ ಕಸ್ಟಡಿ ಅವಧಿ ಮಾರ್ಚ್ 7ರವರೆಗೆ ವಿಸ್ತರಿಸಲಾಗಿದೆ ಎಂದರು. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್
Advertisement
Special court in Mumbai extends ED custody of Maharashtra’s Minorities Affairs Minister #NawabMalik till March 7 in a money-laundering probe linked to the activities of fugitive gangster #DawoodIbrahim and his aides. pic.twitter.com/geecFnTP1t
— All India Radio News (@airnewsalerts) March 3, 2022
Advertisement
ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್‍ರನ್ನು ಇಡಿ ಫೆ.23 ರಂದು ಬಂಧಿಸಿತು. ಆ ಬಳಿಕ ಫೆ.25 ರಂದು ಆನಾರೋಗ್ಯ ಕಾರಣದಿಂದ ನವಾಬ್ ಮಲಿಕ್ ಆಸ್ಪತ್ರೆ ದಾಖಲಾಗಿದ್ದರು. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ
Advertisement
ನವಾಬ್ ಮಲಿಕ್, ದಾವೂದ್ ಇಬ್ರಾಹಿಂನ ತಂಗಿ ಹಸೀನಾ ಪಾರ್ಕರ್‌ಗೆ 55 ಲಕ್ಷ ಅಕ್ರಮ ಹಣ ಮತ್ತು ಮುಂಬೈನ ಕುರ್ಲಾದಲ್ಲಿ ಮೂರು ಎಕರೆ ಜಾಗ ನೀಡಿದ ಆರೋಪವಿದೆ. ಫೆ.23 ರಂದು ಇಡಿ ನವಾಬ್ ಮಲಿಕ್‍ರನ್ನು ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಬಂಧಿಸಿ ವಿಚಾರಣೆಗೆ ಒಳಪಡಿಸಿ ಕಸ್ಟಡಿಗೆ ಪಡೆದುಕೊಂಡಿತ್ತು. ನವಾಬ್ ಮಲಿಕ್, ಭೂಗತ ಪಾತಕಿಗಳೊಂದಿಗೆ ಒಡನಾಟ, ಅಕ್ರಮ ಆಸ್ತಿ ವ್ಯವಹಾರ ಮತ್ತು ಹವಾಲ ಡೀಲ್ ನಡೆಸಿರುವ ಬಗ್ಗೆ ಆರೋಪವಿದೆ.