ಮುಂಬೈ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ನವಾಬ್ ಮಲಿಕ್‌ಗೆ ಭೂಗತ ಲೋಕದೊಂದಿಗೆ ನಂಟಿತ್ತು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ ಮಾಡಿದ್ದಾರೆ.
Advertisement
ಜೈಲಿನಲ್ಲಿರುವ ಡ್ರಗ್ ಪೆಡ್ಲರ್‌ನಿಂದ ಹಣ ಪಡೆದು ವಿಡಿಯೊ ಮಾಡಿಸಿದ್ದರು ಎಂದು ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪವನ್ನು ಫಡ್ನವಿಸ್ ತಳ್ಳಿ ಹಾಕಿದ್ದಾರೆ. ಅಲ್ಲದೇ ಎನ್‌ಸಿಪಿ ನಾಯಕನ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಭೂಗತ ಲೋಕದೊಂದಿಗೆ ಸಚಿವ ಮಲಿಕ್ ನಂಟು ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ರಿಲೀಸ್?
Advertisement
ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವವರು ನನ್ನ ಬಗ್ಗೆ ಮಾತನಾಡುವುದಿಲ್ಲ. ಪಾತಕ ಲೋಕದೊಂದಿಗೆ ನವಾಬ್ ಮಲಿಕ್ ನಂಟು ಹೊಂದಿರುವ ಬಗ್ಗೆ ಶೀಘ್ರವೇ ಸಾಕ್ಷ್ಯಾಧಾರ ಒದಗಿಸುತ್ತೇನೆ ಎಂದು ಫಡ್ನವಿಸ್ ಹೇಳಿದ್ದಾರೆ. ಇದೇ ವೇಳೆ ನವಾಬ್ ಮಲಿಕ್‌ರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪ್ರಶ್ನಿಸಿದ್ದಾರೆ.
Advertisement
Advertisement
ಜಯದೀಪ್ ರಾಣಾ ಅವರು ಈಗಾಗಲೇ ವಿಡಿಯೊ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದು ನಾಲ್ಕು ವರ್ಷ ಹಳೆಯದಾಗಿದ್ದು, ಈಗ ಪ್ರಸಾರವಾಗುತ್ತಿದೆ ಎಂದು ಫಡ್ನಿವಿಸ್ ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಯ ಮೇಲೆ ಹಸು ದಾಳಿ
ಮಲಿಕ್ ಅವರು ತಮ್ಮ ಅಳಿನ ವಿರುದ್ಧದ ಚಾರ್ಜ್ ಶೀಟ್ ತೆಗೆಸಿಹಾಕಲು ಎನ್‌ಸಿಬಿ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಅವರು ದೀಪಾವಳಿಯ ಮೊದಲು ಸಣ್ಣ ಪಟಾಕಿ ಹಚ್ಚಿದ್ದಾರೆ. ದೀಪಾವಳಿ ನಂತರ ನಾನು ದೊಡ್ಡ ಪಟಾಕಿಯನ್ನೇ ಹಚ್ಚುತ್ತೇನೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಸ್ತರಿಸಲು ಬಿಜೆಪಿ ಸಹಕರಿಸಿದೆ ಎಂದು ನವಾಬ್ ಮಲೀಕ್ ಈಚೆಗೆ ಆರೋಪಿಸಿದ್ದರು. ಖ್ಯಾತ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಇರುವ ಡ್ರಗ್ ಆರೋಪಗಳ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಧರ್ಮದ ಬಗ್ಗೆಯೂ ಪ್ರಶ್ನಿಸಿದ್ದರು.