ಬೆಳಗಾವಿ: ಕೋರ್ಟ್‍ನಲ್ಲಿ ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ಅವರ ವಿರುದ್ಧ ಎಫ್‍ಐಆರ್ ಆಗಿ 13 ದಿನ ಕಳೆದರೂ ಪೊಲೀಸರು ಈವರೆಗೂ ರಾಜಕುಮಾರ ಟಾಕಳೆ ಅವರನ್ನು ಬಂಧಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಬಂದ ಬಳಿಕ 20 ದಿನಗಳಿಂದ ಬೆಳಗಾವಿಯಲ್ಲಿ ಇದ್ದು, ಕಾನೂನು ಹೋರಾಟ ಮಾಡುತ್ತಿದ್ದೇನೆ. ನನಗೆ ಆದ ಅನ್ಯಾಯದ ವಿರುದ್ಧ ಎಪಿಎಂಸಿ ಠಾಣೆಗೆ ದೂರು ನೀಡಿದ್ದೇನೆ. ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ರಾಜಕುಮಾರ ಟಾಕಳೆ ವಿರುದ್ಧ ಎಫ್‍ಐಆರ್ ಆಗಿ 13 ದಿನ ಕಳೆದಿದೆ. ಈವರೆಗೂ ರಾಜಕುಮಾರ್ ಟಾಕಳೆ ಬಂಧನವಾಗಿಲ್ಲ. ಘನ ನ್ಯಾಯಾಲಯ ನವ್ಯಶ್ರೀಗೆ ಮತ್ತಷ್ಟು ಶಕ್ತಿ ಕೊಟ್ಟಿದೆ ಎಂದರು.
Advertisement
Advertisement
ನವ್ಯಶ್ರೀ ಫೌಂಡೇಶನ್ ಸರ್ಕಾರದಿಂದ ನೊಂದಾಯಿತ ಸಂಸ್ಥೆಯಾಗಿದೆ. ನೆರೆ ವೇಳೆ ಬಾಗಲಕೋಟೆಗೆ ಹೋಗಿ ಕೆಲಸ ಮಾಡಿದ್ದೇನೆ. ಕೋವಿಡ್ ವೇಳೆ ರೈತರ ಬಳಿ ತರಕಾರಿ ಖರೀದಿಸಿದ್ದೇವೆ. ನವ್ಯ ಫೌಂಡೇಶನ್‍ಗೆ ನವ್ಯಶ್ರೀ ಒಬ್ಬಳೇ ಅಲ್ಲ ಎಲ್ಲಾ ಪದಾಧಿಕಾರಿಗಳು ಇದ್ದಾರೆ. ನವ್ಯ ಫೌಂಡೇಶನ್‍ಗೆ ಬಹಳಷ್ಟು ಜನ ಸಹಕಾರ ಕೊಟ್ಟಿದ್ದಾರೆ. ನವ್ಯಶ್ರೀ ಸತ್ಯದ ಪರ ನಿಂತಿದ್ದಾಳೆ ಓಡಿ ಹೋಗಿಲ್ಲ ಎಂದು ಹೇಳಿದರು.
Advertisement
ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜಕುಮಾರ ಟಾಕಳೆ ನನ್ನ ಬಳಿ ಸಾಲದ ಹಣ ಪಡೆದಿದ್ದು ಬರೆದು ಕೊಟ್ಟಿದ್ದಾರೆ. ಎರಡು ಲಕ್ಷ ರೂ. ಡಿಡಿ ಬಡ್ಡಿ ಸಮೇತ ಸಂದಾಯ ಮಾಡಿರುತ್ತೇನೆ ಅಂತಾ ಬರೆದುಕೊಟ್ಟಿದ್ದಾರೆ. ಇನ್ನು ಮುಂದೆ ನಾನು ನವ್ಯಶ್ರೀ ಯಾವ ವಿಚಾರಕ್ಕೆ ಹೋಗಲ್ಲ ಅಂತಾ ಬರೆದುಕೊಟ್ಟಿದ್ದಾರೆ. ನನಗೆ ಕೊಡಬೇಕಾದ ಹಣ ಕೊಟ್ಟು ಎಫ್‍ಐಆರ್‌ನಲ್ಲಿ ತಿರುಚಿದ್ದಾನೆ. ತಾನೇ ತೋಡಿದ ಖೆಡ್ಡಾಗೆ ರಾಜಕುಮಾರ ಟಾಕಳೆ ಬಿದ್ದಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
Advertisement
ರಾಜಕಾರಣದಲ್ಲಿ ನನಗೆ ದೆಹಲಿ ನಾಯಕರ ಸಂಪರ್ಕ ಇರೋದು ಚುನಾವಣೆ ಸಮಯದಲ್ಲಾಗಿತ್ತು. ನಾನು ನಾಯಕಿ ಅಲ್ಲ ಸೇವಕಿ ಅಂತಾ ಈಗಾಗಲೇ ಹೇಳಿದ್ದೇನೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಕೇರಳ, ದೆಹಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೇನೆ ಎಂದರು.
ನನಗೆ ಪಕ್ಷದ ಆದೇಶ ಬಂದ ಸಂದರ್ಭದಲ್ಲಿ ನಾನು ಚುನಾವಣಾ ಪ್ರಚಾರಕ್ಕೆ ಹೋಗಿದ್ದೇನೆ. ಕರ್ನಾಟಕ ವಿಧಾನಸಭೆ ಉಪಚುನಾವಣೆ ವೇಳೆಯೂ ಕೆಲಸ ಮಾಡಿದ್ದೇನೆ. ಬಹುಶಃ ಒಂದು ಕೆಟ್ಟ ಘಳಿಗೆ ನನಗೆ ಆಪಾದನೆಗಳು ಬಂದಿವೆ. ಸಾವಿರ ಟೀಕೆ ಎದುರಿಸುವ ಶಕ್ತಿ ನನ್ನ ಹತ್ತಿರ ಇದೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ ತಕ್ಷಣ ನಾನು ಓಡಿ ಹೋಗಿಲ್ಲ. 20 ದಿನಗಳಿಂದ ಎಪಿಎಂಸಿ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.
ರಾಜಕೀಯ ನಾಯಕರ ಸಪೋರ್ಟ್ ನಾನು ಕೇಳಿಲ್ಲ. ರಾಜಕುಮಾರ ಟಾಕಳೆಗೆ ಹಣ ಕೊಟ್ಟು ಕೊಂಡುಕೊಳ್ಳುವ ಅಭ್ಯಾಸ ಇದೆ. ರಾಜಕುಮಾರ ಟಾಕಳೆ ಮೊಬೈಲ್ ಸೀಜ್ ಮಾಡಿದರೆ ಮತ್ತಷ್ಟು ಹೆಣ್ಣುಮಕ್ಕಳ ಮರ್ಯಾದೆ ಉಳಿಯುತ್ತದೆ. ನಾನು ಎಫ್‍ಐಆರ್ ಕೊಟ್ಟು 13 ದಿನ ಆಗಿದೆ. ರಾಜಕುಮಾರ ಟಾಕಳೆಯನ್ನು ಕರೆದು ವಿಚಾರಣೆ ಮಾಡಬಹುದಲ್ಲ ಎಂದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ವೋಡ್ಕಾ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕ
ಬುಧವಾರ ಸಂಜೆ ಮನೆಯಿಂದ ಆತ ಪರಾರಿಯಾಗಿದ್ದಾನೆ. ರಾಜಕುಮಾರ ಟಾಕಳೆ ಬಂಧನ ಏಕೆ ಆಗಿಲ್ಲ. ದಯಮಾಡಿ ಬಂಧನ ಮಾಡಬೇಕು. ಆತ ನನ್ನ ಹೆಂಡತಿ ಅಂತಾ ಒಪ್ಪಿಕೊಳ್ಳಲಿ ಅಥವಾ ಬಿಡಲಿ ಅದನ್ನು ಹೇಗೆ ಪ್ರೂವ್ ಮಾಡಬೇಕೆಂದು ನನಗೆ ಗೊತ್ತಿದೆ. ನನ್ನ ಕಿಡ್ನಾಪ್ ಮಾಡಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕೊಟ್ಟಿದ್ದೇನೆ. ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ದಾಖಲೆ ನೀಡಿದ್ದೇನೆ ಎಂದರು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ವಿಚಾರಕ್ಕೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ನವ್ಯಶ್ರೀ ಆಯ್ಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಏಕೆ ಹೋಗಬಾರದು. ನನಗೆ ಸಂಬಂಧ ದಾಖಲೆ ಆ ವಾಹಿನಿಗೆ ಹೋಗಿವೆ. ಕೆಲವು ಚರ್ಚೆ ಆಗಿದೆ ಎಂದು ತಿಳಿಸಿದರು.