ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ ಸೇರಿದಂತೆ ಇತರ ಸೆಕ್ಷನ್ ಹಾಕಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Advertisement
ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಗಮಿಸಿ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ
Advertisement
Advertisement
ಸದ್ಯ ರಾಜಕುಮಾರ್ ಟಾಕಳೆ ನೀಡಿರುವ ದೂರಿನ ವಿಚಾರಣೆಗೆ ಬೆಳಗಾವಿ ಎಪಿಎಂಸಿ ಪೊಲೀಸರು ನೋಟಿಸ್ ನೀಡಿದ್ದು, ಬೆಳಗಾವಿಯಲ್ಲಿ ಇರಲು ವಸತಿ ಸಮಸ್ಯೆ ಕಾರಣ ನೀಡಿ ಮುಚ್ಚಳಿಕೆ ಪತ್ರವನ್ನು ನವ್ಯಶ್ರೀ ಬರೆದುಕೊಟ್ಟಿದ್ದಲ್ಲದೇ ತನಿಖೆಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ
Advertisement
Live Tv
[brid partner=56869869 player=32851 video=960834 autoplay=true]