ಬೆಳಗಾವಿ: ತೋಟಗಾರಿಕೆ ಇಲಾಖೆ ನಿರ್ದೇಶಕ ರಾಜಕುಮಾರ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ರೌಡಿಗಳ ಸರ್ಪಗಾವಲಿನೊಂದಿಗೆ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ ಎಂದು ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಆರೋಪಿಸಿದ್ದಾರೆ.
ರಾಜಕುಮಾರ ಟಾಕಳೆ ಅವರು ನೀಡಿರುವ ದೂರಿನ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ನನ್ನನ್ನು ಕಿಡ್ನಾಪ್ ಮಾಡಿ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ. ನನ್ನಿಂದ ಬಲವಂತವಾಗಿ ಹೇಳಿಕೆ ಪಡೆದು, ಅದನ್ನೂ ಮಾರಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತನ್ನ ಹೆಸರಲ್ಲಿ ಹೋಟೆಲ್ ರಿಜಿಸ್ಟರ್ ಮಾಡಿಲ್ಲ ಅಂತಾ ಅಪ್ಪ-ಅಮ್ಮನ ತಲೆಗೆ ಗುಂಡಿಕ್ಕಿ ಕೊಂದ
Advertisement
Advertisement
ಟಾಕಳೆ ವಿರುದ್ಧ ನಾನು ಸಿಇಎನ್ ಠಾಣೆಯಲ್ಲಿ ದೂರು ನೀಡುತ್ತಿದ್ದೇನೆ. ಮದುವೆಯಾಗಿ ಪತ್ನಿಯಿದ್ದರೂ ಮೋಸದಿಂದ ಮದುವೆಯಾಗಿರುವುದಕ್ಕಾಗಿ ವಂಚನೆ ಪ್ರಕರಣ, ಮಾವಿನ ತೋಪಿನಲ್ಲಿ ಕೂಡಿಹಾಕಿ ಬಲವಂತದಿಂದ ಹೇಳಿಕೆ ಪಡೆದಿದ್ದಕ್ಕಾಗಿ ಕಿಡ್ನಾಪ್ ಪ್ರಕರಣ, ನನ್ನ ಚಾರಿತ್ರ್ಯ ಹರಣ ಮಾಡಲು ಅಶ್ಲೀಲ ವೀಡಿಯೋಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವೆಬ್‌ಸೈಟ್‌ಗಳಿಗೆ ಮಾರಿಕೊಂಡಿದ್ದಕ್ಕಾಗಿ ಸೈಬರ್ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಿದ್ದೇನೆ. ಮುಖ್ಯವಾಗಿ ನನ್ನನ್ನು ಹನಿಟ್ರ್ಯಾಪ್ ಮಾಡಿ, ಹಣ ಪೀಕಿದಕ್ಕಾಗಿ ಹನಿಟ್ರ್ಯಾಪ್ ಪ್ರಕರಣದ ಅಡಿಯಲ್ಲೂ ದೂರು ದಾಖಲಿಸಲಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ವಾಟ್ಸಾಪ್‌ನಲ್ಲೇ ತಲಾಖ್ ನೀಡಿ ಪರಾರಿಯಾದ
Advertisement
Advertisement
ಈಗಾಗಲೇ ಸುಳ್ಳು ದೂರಿನ ಮೇರೆಗೆ ನನ್ನ ಮೇಲೆ ದಾಖಲಾದ ಎಫ್‌ಐಆರ್ ಸ್ಕ್ವಾಷ್ ಮಾಡಲು ನ್ಯಾಯಾಲಯಕ್ಕೆ ಕೋರಿದ್ದೇನೆ. ಆ ವೀಡಿಯೋ ಇರೋದು ಬೆಂಗಳೂರಿನ ಕುಮಾರ ಕೃಪಾ ಗೆಸ್ಟ್‌ಹೌಸ್‌ನದ್ದು, ಅದಕ್ಕಾಗಿ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸೋಮವಾರ ರಾತ್ರಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸ್ನೇಹಾ ಅವರನ್ನು ಭೇಟಿಯಾಗಿ ಸಾಕ್ಷಿ ಸಮೇತ ಎಲ್ಲ ವಿಚಾರಗಳನ್ನು ಮುಂದಿಟ್ಟಿದ್ದೇನೆ. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಕೊಡಿಸಲು ಕೇಳಿಕೊಂಡಿದ್ದೇನೆ ಎಂದು ನವ್ಯಶ್ರೀ ಹೇಳಿದ್ದಾರೆ.
ನಾನು ಅವನೊಂದಿಗೆ ಸೆಕ್ಸ್‌ಮೆಟ್ ತರಹ ಇರಬೇಕು ಅನ್ನೋದು ಟಾಕಳೆ ಉದ್ದೇಶ. ಅದಕ್ಕಾಗಿ ನನ್ನನ್ನು ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ಇರಿಸಿದ್ದ. ಅಲ್ಲಿ ಯಾರೂ ಗಂಡಸರು ಬರಲ್ಲ ಅಂತಾ ಇರಿಸಿದ್ದ. ಆ ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದೆ. ಈತ ನನ್ನ ಜೊತೆ ಇದ್ದ ವೀಡಿಯೋಗಳನ್ನ ವೈರಲ್ ಮಾಡಿದ್ದಾನೆ. ನಾನು ಅವನ ವಿರುದ್ಧ ದೂರು ನೀಡುತ್ತೇನೆ ಎಂದಿದ್ದಾರೆ.
ಸದ್ಯ ನನಗೆ ಈಗ ಬಂದಿರುವ ಮಾಹಿತಿಗಳೆಲ್ಲವೂ 2ನೇ ವ್ಯಕ್ತಿಯಿಂದ. ಇನ್ನೂ ಈ ತನಿಖೆಯಿಂದೆ ಯಾರಿದ್ದಾರೆ ಎಂಬುದೆಲ್ಲವನ್ನೂ ಪೊಲೀಸ್ ತನಿಖೆಯಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಏನಿದು ಪ್ರಕರಣ?
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರ ರಾವ್ ಹಾಗೂ ಆಪ್ತ ತಿಲಕ್ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.