ಸೆಲೆಬ್ರೆಟಿಗಳು ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳುವ ಭರದಲ್ಲಿ ವಿವಾದದ ಸುಳಿಗೆ ಸಿಲುಕಿಕೊಳ್ಳುತ್ತಾರೆ. ತಾವಾಡಿದ ಮಾತಿನಿಂದಾಗಿ ಇಂಥದ್ದೊಂದು ವಿವಾದಕ್ಕೆ ಕಾರಣರಾಗಿದ್ದರು ಮಾಲಿವುಡ್ ನಟ ವಿನಾಯಕ್. ‘ನನಗೆ ಬೇಕು ಅನಿಸಿದ್ರೆ ಮಹಿಳೆಯನ್ನು ಮಂಚಕ್ಕೆ ಕರೆಯುತ್ತೇನೆ’ ಎಂದು ಅವರು ಹೇಳಿದ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅನೇಕ ತಾರೆಯರು ಇವರ ಮಾತುಗಳನ್ನು ಖಂಡಿಸಿದ್ದರು. ವಿನಾಯಕ್ ಅವರ ಈ ಹೇಳಿಕೆ ಕುರಿತಾಗಿ ನಟಿ ನವ್ಯಾ ನಾಯರ್ ಇದೀಗ ಕ್ಷಮೆ ಕೇಳಿದ್ದಾರೆ.
ನಟ ವಿನಾಯಕ್ ಮೀಟೂ ಕುರಿತಾಗಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಮಾಲಿವುಡ್ನಲ್ಲಿ ಸಖತ್ ಸುದ್ದಿಯಾಗಿತ್ತು. ಈ ನಟನ ತಪ್ಪಿಗೆ, ನಟಿ ನವ್ಯಾ ನಾಯರ್ ಯಾಕೆ ಕ್ಷಮೆ ಕೇಳಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
Advertisement
Advertisement
ಇತ್ತೀಚೆಗೆ ಮಲಯಾಳಂನ ‘ಒರುಥಿ’ ಸಿನಿಮಾ ಪ್ರಚಾರದ ವೇಳೆ ಈ ನಟ ಮಾತನಾಡುತ್ತಾ, ಈವರೆಗೂ ನಾನು 10 ಮಹಿಳೆಯರ ಜೊತೆ ಸೆಕ್ಸ್ ಮಾಡಿದ್ದೇನೆ. ನೇರವಾಗಿಯೇ ಅವರನ್ನು ನನ್ನ ಜೊತೆ ನೀವು ಮಲಗುತ್ತೀರಾ ಎಂದು ಕೇಳುತ್ತೇನೆ. ಅವರು ಸರಿ ಎಂದರೆ ಓಕೆ. ಇಲ್ಲವೆದರೆ ನಾನು ಅಲ್ಲಿಗೆ ಬಿಟ್ಟುಬಿಡುತ್ತೇನೆ. ಸೆಕ್ಸ್ ವಿಷಯದಲ್ಲಿ ನಾನು ಯಾರನ್ನೂ ಬಲವಂತ ಮಾಡುವುದಿಲ್ಲ. ಮಹಿಳೆ ಬಳಿ ಸೆಕ್ಸ್ ಬಗ್ಗೆ ಕೇಳುವುದು ಮೀಟೂ ಎಂದಾದರೆ ನಾನದನ್ನು ಮುಂದುವರೆಸುತ್ತೇನೆ ಎಂದು ನೇರವಾಗಿ ಹೇಳುವ ಮೂಲಕ ವಿವಾದದ ಸುಳಿಗೆ ಸಿಲುಕಿಕೊಂಡಿದ್ದರು. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು
Advertisement
Advertisement
ಒರುಥಿ ಸಿನಿಮಾದಲ್ಲಿ ನಟಿ ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ವಿನಾಯಕನ್ ಈ ಹೇಳಿಕೆ ನೀಡುವಾಗ ಅವರು ವೇದಿಕೆ ಮೇಲೆಯೇ ಇದ್ದರು. ಇದರಿಂದ ನವ್ಯಾ ಅಭಿಮಾನಿಗಳು ಸಹ ಬೇಸರ ವ್ಯಕ್ತಪಡಿಸಿದ್ದರು. ನವ್ಯಾ ನಾನು ಅಸಾಹಯಕಳಾಗಿದ್ದೆ ಎಂದು ಸಮರ್ಥನೆ ಕೊಟ್ಟಿದ್ದರು. ಆದರೂ ನವ್ಯಾ ಆ ವೇಳೆ ಮೌನವಾಗಿದ್ದರು ಯಾಕೆ ಎನ್ನುವ ಟೀಕೆಗೆ ಇದೀಗ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು
ಒರಥಿ ಸಿನಿಮಾ ವಿಕ್ಷಣೆಗೆ ಚಿತ್ರಮಂದಿರಕ್ಕೆ ಬಂದವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನವ್ಯಾ, ವಿನಾಯಕ್ ಮೀಟೂ ಅಭಿಯಾನದ ಬಗ್ಗೆ ಕಾಮೆಂಟ್ ಮಾಡುವಾಗ ವೇದಿಕೆ ಮೇಲೆ ಅನೇಕ ಪುರುಷರು ಇದ್ದರು. ಆದರೆ ಅವರೆಲ್ಲರನ್ನು ಬಿಟ್ಟು ನನ್ನನ್ನೇ ಪ್ರಶ್ನಿಸುತ್ತಿದ್ದಾರೆ. ಆ ಸಂಧರ್ಭದಲ್ಲಿ ನಾನು ಮೈಕ್ ತೆಗೆದುಕೊಳ್ಳಲು ಪ್ರಯತ್ನಿಸಿದರೂ ನನಗೆ ಸಾಧ್ಯವಾಗಲಿಲ್ಲ. ಅವರ ಹೇಳಿಕೆ ಅಸಂಬದ್ಧವಾಗಿದೆ. ಅವರ ಸಹೋದ್ಯೋಗಿಯಾಗಿ ನಾನು ಅವರ ಪರವಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಒರಥಿ ಸಿನಿಮಾದಲ್ಲಿ ಮಹಿಳೆಯ ಸಾಮರ್ಥ್ಯವನ್ನು ಚಿತ್ರೀಕರಿಸಿದೆ. ಮಹಿಳೆ ತನ್ನ ಜೀವನದಲ್ಲಿ ಎದುರಾಗುವ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಎದುರಿಸಿ ಹೇಗೆ ಅಧಿಕಾರ ಪಡೆಯುತ್ತಾಳೆ ಎನ್ನುವುದನ್ನು ಸಿನಿಮಾದಲ್ಲಿ ಉತ್ತಮವಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.