ಕಾರವಾರದ ವಾಯು ಮಾರ್ಗದಲ್ಲಿ ಸಂಚರಿಸ್ತಿದ್ದ ಮಿಗ್ 29 ಕೆ ವಿಮಾನ ಪತನ

Public TV
3 Min Read
Mig B

– ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡ ಪೈಲಟ್‍
– ನಿರ್ಜನ ಪ್ರದೇಶ ಘಟನೆ, ತಪ್ಪಿದ ಭಾರೀ ಅನಾಹುತ

ಕಾರವಾರ: ಗೋವಾದ ನೌಕಾ ನೆಲೆ ಐಎನ್‍ಎಸ್ ಹಂಸದಿಂದ ಎಂದಿನಂತೆ ಭಾನುವಾರ ಹಾರಾಟ ನಡೆಸಿದ್ದ ಮಿಗ್ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಗ್ 29 ಕೆ ವಿಮಾನವು ಗೋವಾ ಕರಾವಳಿಯಲ್ಲಿ ಭಾನುವಾರ ತರಬೇತಿ ಹಾರಾಟ ನಡೆಸಿತ್ತು. ಆದರೆ ಬೆಳಗ್ಗೆ 10.30 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ವಿಮಾನದ ಪೈಲಟ್‌ ಸುರಕ್ಷಿತವಾಗಿ ಪ್ಯಾರಾಚೂಟ್ ಸಹಾಯದಿಂದ ಹಾರಿದ್ದು, ಅವರನ್ನು ರಕ್ಷಿಸಿದ ಸ್ಥಳೀಯರು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಅವರನ್ನು ಗೋವಾ ಪೊಲೀಸರು ಹಾಗೂ ನೌಕಾದಳವು ಗೋವಾ ನೌಕಾ ನೆಲೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

mig 21 2

ಐಎನ್ಎಸ್ ಹಂಸದಿಂದ ಟೇಕ್ ಆಫ್ ಆಗಿ ಕಾರವಾರದ ವಾಯು ಮಾರ್ಗ ದಲ್ಲಿ ಸಂಚರಿಸುತಿದ್ದ  ವಿಮಾನ ವಿಗ್ 29ಕೆ ತಾಂತ್ರಿಕ ಕಾರಣದಿಂದಾಗಿ ಕಾರವಾರ ಗೋವಾ ಮಧ್ಯದ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದೆ. ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಬೆಂಕಿ ಹತ್ತಿದ್ದು ಈ ವೇಳೆ ಪೈಲೆಟ್ ಯುದ್ದ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತ ನೌಕಾಪಡೆ, ‘ಅಪಘಾತ ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ’ ಎಂದು ತಿಳಿಸಿದೆ.  ಇದನ್ನೂ ಓದಿ: ಮಿಗ್-17 ಹೆಲಿಕಾಪ್ಟರ್ ಪತನ ದೊಡ್ಡ ತಪ್ಪು, ಮುಂದೆ ಈ ರೀತಿ ಆಗಲ್ಲ- ಐಎಎಫ್ ಮುಖ್ಯಸ್ಥ ಭದೌರಿಯಾ

ಹಾರುವ ಶವ ಪಟ್ಟಿಗೆ ಎಂದೇ ಕರೆಯಲಾಗುವ ಮಿಗ್ ವಿಮಾನಗಳಿಂದ ಅನೇಕ ಅಪಘಾತಗಳು ಅಭವಿಸಿವೆ. 2019ರ ನವೆಂಬರ್‍ನಲ್ಲಿ ಗೋವಾದ ಹಳ್ಳಿಯೊಂದರ ಹೊರಗೆ ಮಿಗ್ 29 ಕೆ ಅಪಘಾತಕ್ಕೀಡಾದ ಮೂರು ತಿಂಗಳ ಬೆನ್ನಲ್ಲೇ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

ನವೆಂಬರ್ 16ರಂದು ಭಾರತೀಯ ನೌಕಾಪಡೆಯ ಎಂಐಜಿ ತರಬೇತಿ ವಿಮಾನ ಪತನವಾಗಿತ್ತು. ವಿಮಾನವು ರಾಜ್ಯ ರಾಜಧಾನಿ ಪಣಜಿಯಿಂದ 15 ಕಿ.ಮೀ ದೂರದಲ್ಲಿರುವ ವರ್ನಾದ ಹೊರವಲಯದಲ್ಲಿ ಅಪ್ಪಳಿಸಿತ್ತು. ಪೈಲಟ್ ವಿಮಾನವನ್ನು ನಿರ್ಜನ ಪ್ರದೇಶದವರೆಗೂ ತಂದಿದ್ದರಿಂದ ಭಾರೀ ದುರಂತವನ್ನು ತಪ್ಪಿಸಿದ್ದರು. ಆಗಲೂ ಇಬ್ಬರು ಪೈಲಟ್‍ಗಳು ಅಪಾಯದಿಂದ ಪಾರಾಗಿದ್ದರು.

MIG a

ನವೆಂಬರ್ 2019ರ ಅಪಘಾತವು ಎಡ ಎಂಜಿನ್ ಜ್ವಾಲೆಯಾದಾಗ ಮತ್ತು ವಿಮಾನದ ಬಲ ಎಂಜಿನ್ ಹಕ್ಕಿ ಹೊಡೆದ ಕಾರಣ ಬೆಂಕಿಗೆ ಆಹುತಿಯಾಯಿತು.

2018ರ ಜನವರಿಯಲ್ಲಿ ಗೋವಾದಲ್ಲಿ ಮಿಗ್ -29 ಕೆ ವಿಮಾನ ಪತನವಾಗಿತ್ತು. ವಿಮಾನವು ರನ್‍ವೇ ದಿಂದ ಹೊರಟು ಐಎನ್‍ಎಸ್ ಹಮ್ಸಾ ನೆಲೆಯೊಳಗೆ ಅಪ್ಪಳಿಸಿತು. ತರಬೇತಿ ಪಡೆಯುತ್ತಿದ್ದ ಪೈಲಟ್‍ಗಳು ವಿಮಾನದಿಂದ ಹಾರಿ ಬದುಕುಳಿದಿದ್ದರು. ಘಟನೆಯಿಂದಾಗಿ ಗೋವಾ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಗಳ ಆಗಮನ ಮತ್ತು ನಿರ್ಗಮನ ವಿಳಂಬವಾಗಿತ್ತು.

Mig

ಹಾರುವ ಶವಪೆಟ್ಟಿಗೆ:
ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟ 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 122 ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ.

2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *