ಜಗನ್ಮಾತೆ ದುರ್ಗಾದೇವಿಯ ಎಂಟನೇ ರೂಪ ಮಹಾಗೌರಿ. ಶ್ವೇತ ಬಣ್ಣದ ದೇವಿಗೆ ಶಂಖ, ಚಂದ್ರ ಮತ್ತು ಕುಂದ ಪುಷ್ಪ ಇವುಗಳ ಉಪಮೆ ಕೊಡಲಾಗಿದೆ. ಇವಳಿಗೆ ನಾಲ್ಕು ಭುಜಗಳಾಗಿದ್ದು, ಇವಳ ವಾಹನ ವೃಷಭವಾಗಿದೆ. ಆ ವೃಷಭ ಕೂಡ ಬೆಳ್ಳಗಿದೆ. ಇವಳ ಮೇಲಿನ ಬಲಕೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಕೈಯಲ್ಲಿ ತ್ರಿಶೂಲವಿದೆ.
ಮೇಲಿನ ಎಡಕೈಯಲ್ಲಿ ಢಮರು ಹಾಗೂ ಕೆಳಗಿನ ಎಡಗೈಯಲ್ಲಿ ವರಮುದ್ರೆ ಇದೆ. ತನ್ನ ಪಾರ್ವತಿ ರೂಪದಲ್ಲಿ ಇವಳು ಭಗವಾನ್ ಶಿವವನ್ನು ಪತಿಯಾಗಿ ಪಡೆಯಲು ಭಾರೀ ಕಠೋರ ತಪಸ್ಸು ಮಾಡಿದ್ದಳು. ನಾನು ಶಿವನಲ್ಲದೇ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಕಠೋರ ತಪಸ್ಸಿನಿಂದಾಗಿ ಈಕೆಯ ಶರೀರ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇವಳ ತಪಸ್ಸಿಗೆ ಸಂತುಷ್ಟನಾಗಿ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಶ್ವೇತ ಬಣ್ಣಕ್ಕೆ ಬದಲಾದ ಕಾರಣ ಈಕೆಗೆ ಗೌರಿ ಹೆಸರು ಬಂದಿದೆ.
Advertisement
Advertisement
ನವರಾತ್ರಿಯ ಎಂಟನೇ ದಿನ ಇವಳ ಉಪಾಸನೆಯಿಂದ ಭಕ್ತರ ಎಲ್ಲ ಕಷ್ಟಗಳು ತೊಳೆದು ಹೋಗುತ್ತದೆ. ಅವರ ಪಾಪಗಳೂ ಕೂಡ ನಾಶವಾಗಿ ಹೋಗುತ್ತದೆ. ಭವಿಷ್ಯದಲ್ಲಿ ಪಾಪ-ಸಂತಾಪ, ದೈನ್ಯ- ದುಃಖ, ಅವರ ಬಳಿಗೆ ಎಂದು ಬರುವುದಿಲ್ಲ. ಅವರು ಎಲ್ಲ ಪ್ರಕಾರದಿಂದ ಪವಿತ್ರ ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ. ಜಗಜ್ಜನನಿಯ ಧ್ಯಾನ-ಸ್ಮರಣೆ, ಪೂಜೆ-ಆರಾಧನೆಯು ಭಕ್ತರಿಗಾಗಿ ಎಲ್ಲಾವಿಧದಿಂದ ಶ್ರೇಯಸ್ಕರವಾಗಿದೆ.
Advertisement
ಇವಳ ಕೃಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತದೆ. ಮನಸ್ಸನ್ನು ಏಕನಿಷ್ಠವಾಗಿಸಿ ಮನುಷ್ಯನು ಸದಾಕಾಲ ಇವಳ ಧ್ಯಾನ ಮಾಡಬೇಕು. ಇವಳ ಉಪಾಸನೆಯಿಂದ ಭಕ್ತರ ಅಸಂಭವ ಕಾರ್ಯಕಗಳು ಕೂಡ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ದಸರಾ ಸುದ್ದಿಗಳು:
1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?
2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ
3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್
4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ
5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ
6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ
7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ
8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ
9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?
10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ
11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ
12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ
13. ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ
14. ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?
15. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ
16. ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ
17. 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?