Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

Latest

Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

Public TV
Last updated: September 26, 2025 6:47 pm
Public TV
Share
4 Min Read
Katyayani Devi
SHARE

ನವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ (Katyayani Devi) ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ರಾಕ್ಷಸರ ಸೆರೆಯಿಂದ ಬಿಡಿಸಿದವಳು. ಈಕೆ ಮಹಿಷಾಸುರ ಮರ್ಧಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ.

ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು.

ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ (Mahishasura) ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು. ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ಕಾತ್ಯಾಯಿನಿ ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳುಮಾಡಿದ್ದರು. ಇಂದ್ರನ ಸಿಂಹಾಸನವನ್ನೂ ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಇದರಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದಳು.

ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಉಪಾಯಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ.

ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

ಕಾತ್ಯಾಯಿನಿ ದೇವಿ ಕಥೆ:
ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ.

ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂದು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು.

ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.

ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ.

ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.

TAGGED:Katyayani DeviMahishasuraNavaratriಕಾತ್ಯಾಯಿನಿನವರಾತ್ರಿಪುರಾಣ
Share This Article
Facebook Whatsapp Whatsapp Telegram

Cinema news

Bigg Boss Telugu
ತೆಲುಗು ಬಿಗ್‌ಬಾಸ್ ಫಿನಾಲೆಗೆ ಕ್ಷಣಗಣನೆ – ರೇಸ್‌ನಲ್ಲಿ ಇಬ್ಬರು ಕನ್ನಡತಿಯರು
Cinema Latest Top Stories TV Shows
Raj B Shetty
ನನ್ನ, ರಿಷಬ್‌ ಮಧ್ಯೆ ಯಾವುದೇ ಮನಸ್ತಾಪವಿಲ್ಲ: ರಾಜ್‌ ಬಿ ಶೆಟ್ಟಿ ಸ್ಪಷ್ಟನೆ
Cinema Latest Main Post Sandalwood
Dy CM Pawan Kalyan Gifted a Costly Car to OG Director Sujeeth
ಓಜಿ ನಿರ್ದೇಶಕನಿಗೆ 3 ಕೋಟಿಯ ಕಾರ್ ಗಿಫ್ಟ್ ಕೊಟ್ಟ ಪವನ್‌ ಕಲ್ಯಾಣ್‌
Cinema Latest South cinema
darshan vijayalakshmi
ದರ್ಶನ್‌ಗೆ ಬೆನ್ನುನೋವು ಇರೋದು ನಿಜ: ನಟನ ಬದುಕಿನ ಏಳುಬೀಳಿನ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮಾತು
Cinema Latest Sandalwood Top Stories

You Might Also Like

Mangesh Yadav
Cricket

ಅನ್‌ಕ್ಯಾಪ್‌ ಪ್ಲೇಯರ್‌ ಮಂಗೇಶ್‌ ಯಾದವ್‌ಗೆ 5.20 ಕೋಟಿ – ಆರ್‌ಸಿಬಿ ಖರೀದಿಸಿದ ಆಟಗಾರರು ಯಾರು?

Public TV
By Public TV
2 minutes ago
Mandya Suttur Mutt
Districts

ಶ್ರೀ ಸುತ್ತೂರು ಮಠವು ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಯ ಕೇಂದ್ರ – ಥಾವರ್‌ಚಂದ್ ಗೆಹ್ಲೋಟ್

Public TV
By Public TV
34 minutes ago
Police Seize A House and Cow Shed For Selling Cattle Illegally Punjalkatte Dakshina Kannada 1
Dakshina Kannada

ಮಾಂಸಕ್ಕಾಗಿ ಗೋವು ಸಾಗಾಟ – ಪುಂಜಾಲಕಟ್ಟೆಯಲ್ಲಿ ಮನೆಯೇ ಜಪ್ತಿ

Public TV
By Public TV
36 minutes ago
Droupadi Murmu Suttur 2
Districts

ಸದೃಢ ಭಾರತ ನಿರ್ಮಾಣಕ್ಕಾಗಿ ಮಠಗಳು ಯುವಜನತೆಗೆ ಸ್ಫೂರ್ತಿ ತುಂಬಬೇಕು – ದ್ರೌಪದಿ ಮುರ್ಮು

Public TV
By Public TV
1 hour ago
Delhi Pollution 1
Latest

Delhi | ಪಿಯುಸಿ ಪ್ರಮಾಣಪತ್ರ ಹೊಂದಿರದ ವಾಹನಗಳಿಗೆ ಇಂಧನ ಇಲ್ಲ – ಮಾಲಿನ್ಯ ನಿಯಂತ್ರಣಕ್ಕೆ ಹೊಸ ನಿಯಮ

Public TV
By Public TV
3 hours ago
Manjunath Bhandary
Dakshina Kannada

ಸೋನಿಯಾ, ರಾಹುಲ್ ವಿರುದ್ಧ ದೆಹಲಿ ನ್ಯಾಯಾಲಯ ತೀರ್ಪು ಸ್ವಾಗತಾರ್ಹ: ಮಂಜುನಾಥ ಭಂಡಾರಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?