ಬೆಂಗಳೂರು: ಸಿಎಂ ನಿವಾಸ ಕಾವೇರಿ ನವೀಕರಣಕ್ಕೆ 9 ಕೋಟಿ ವೆಚ್ಚ ಮಾಡಿದ್ದು, ರೈತರಿಗೆ ಬರ ಪರಿಹಾರಕ್ಕೆ (Droght Relief) ಬರೀ 2 ಸಾವಿರ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಟೀಕಿಸಿದ್ದಾರೆ.
ರೈತರಿಗೆ ಬರ ಪರಿಹಾರಕ್ಕೆ ಬರೀ ಎರಡು ಸಾವಿರ
ಸಿಎಂ ಬಂಗಲೆಗೆ ನವಕೋಟಿ ಸಿಂಗಾರ
ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲ ಎಂದು ಕೈಚೆಲ್ಲಿ ಕೂತಿರುವ ಸಿಎಂ @siddaramaiah ನವರು, ತಮ್ಮ ಬಂಗಲೆ ನವೀಕರಣಕ್ಕೆ ಕನ್ನಡಿಗರ ತೆರಿಗೆ ಹಣದಲ್ಲಿ 9 ಕೋಟಿ ರೂಪಾಯಿ ಉಡೀಸ್ ಮಾಡಿದ್ದಾರೆ.
ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಅಂತ ಬುರುಡೆ ಬಿಡುವ… pic.twitter.com/Y120fNAncp
— R. Ashoka (ಆರ್. ಅಶೋಕ) (@RAshokaBJP) February 24, 2024
Advertisement
ಈ ಕುರಿತು ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಿಎಂ ಬಂಗಲೆಗೆ (Bungalow) ನವಕೋಟಿ ಸಿಂಗಾರ ಮಾಡಿದ್ದಾರೆ. ರೈತರಿಗೆ (Farmers) ಬರ ಪರಿಹಾರ ನೀಡಲು ಹಣವಿಲ್ಲ ಎಂದು ಕೈಚೆಲ್ಲಿ ಕೂತಿರುವ ಸಿಎಂ ಸಿದ್ದರಾಮಯ್ಯನವರು (Siddaramaiah) ತಮ್ಮ ಬಂಗಲೆ ನವೀಕರಣಕ್ಕೆ ಕನ್ನಡಿಗರ ತೆರಿಗೆ ಹಣದಲ್ಲಿ 9 ಕೋಟಿ ರೂ. ಉಡೀಸ್ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು
Advertisement
Advertisement
ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಬುರುಡೆ ಬಿಡುವ ಮಜಾವಾದಿ ಸಿದ್ದರಾಮಯ್ಯನವರೇ ರಾಜ್ಯದ ಜನತೆ ಭೀಕರ ಬರ, ಸಾಲದ ಹೊರೆ, ಅಭಿವೃದ್ಧಿ ಶೂನ್ಯತೆಯಿಂದ ಸೊರಗುತ್ತಿರುವ ಪರಿಸ್ಥಿತಿಯಲ್ಲಿ ಇಂತಹ ಶೋಕಿ ಬೇಕಿತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮುಲ್ಲ ಖಾನ್ ಎನ್ನುತ್ತಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಸಂಸದ ಅನಂತ್ ಕುಮಾರ್ ಹೆಗಡೆ
Advertisement