ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಾಗ ಪಾಕಿಸ್ತಾನ ಪರ ಬ್ಯಾಟ್ ಬೀಸಿದ್ದ ಪಂಜಾಬ್‍ನ ಕಾಂಗ್ರೆಸ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕವನದ ಮೂಲಕ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಉಗ್ರರರಿಗೆ ಈ ರೀತಿಯ ದಾಳಿಯ ಮೂಲಕವೇ ನೀಡಬೇಕು. ಶಾಂತಿಯಿಂದ ಮಾತನಾಡಿದ್ರೆ ಅವರು ಮತ್ತಷ್ಟು ಚಿಗುರಿಕೊಳ್ಳುತ್ತಾರೆ. ಹಾಗಾಗಿ ಏಟಿಗೆ ಏದಿರೇಟು ಇಂದು ಅನಿವಾರ್ಯವಾಗಿದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
Advertisement
Advertisement
ಸಿಧು ಟ್ವೀಟ್: ಕಬ್ಬಿಣ ಕಬ್ಬಿಣವನ್ನೇ ಕತ್ತರಿಸುತ್ತದೆ. ಬೆಂಕಿ ಬೆಂಕಿಯನ್ನೇ ನಾಶ ಮಾಡುತ್ತೆ. ಒಂದು ವೇಳೆ ಹಾವು ಕಚ್ಚಿದ್ರೆ, ಔಷಧಿಯನ್ನು ಅದರ ವಿಷದಿಂದಲೇ ತಯಾರು ಮಾಡಲಾಗುತ್ತೆ. ಉಗ್ರರನ್ನು ನಾಶ ಮಾಡುವ ಅನಿವಾರ್ಯತೆ ಇದೆ. ಭಾರತೀಯ ವಾಯಸೇನೆಗೆ ಜೈ. ಜೈ ಹಿಂದ್ ಜೈ, ಹಿಂದ್ ಕೀ ಸೇನಾ ಎಂದು ಬರೆದುಕೊಂಡಿದ್ದಾರೆ.
Advertisement
ಪುಲ್ವಾಮಾ ಬಗ್ಗೆ ಸಿಧು ಹೇಳಿದ್ದೇನು?
ದಾಳಿಯಲ್ಲಿ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಭಯೋತ್ಪಾದನೆಗೆ ಯಾವುದೇ ದೇಶ, ಧರ್ಮ ಅಂತಿಲ್ಲ. ಭಾರತ, ಪಾಕಿಸ್ತಾನದ ಜೊತೆ ಮಾತನಾಡಬೇಕು. ಆದರೆ ಯಾರೋ ಮಾಡಿದ ಕೃತ್ಯಕ್ಕೆ ಯಾವುದೇ ದೇಶದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವುಗಳಿಗೆಲ್ಲ ಶಾಂತಿ ಮಾತುಕತೆ ಒಂದೇ ಪರಿಹಾರ ಎಂದು ಹೇಳುವ ಮೂಲಕ ಕೃತ್ಯದಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಪರೋಕ್ಷವಾಗಿ ಕ್ಲೀನ್‍ಚಿಟ್ ನೀಡಿದ್ದರು.
Advertisement
लोहा लोहे को काटता है,
आग आग को काटती है,
सांप जब डंक मारता है, उसका एंटीडोट विष ही है,
आतंकियों का विनाश अनिवार्य है|
भारतीय वायु सेना की जय हो @IAF_MCC
जय हिन्द ???????? जय हिन्द की सेना ????????
— Navjot Singh Sidhu (@sherryontopp) February 26, 2019
ತಮ್ಮ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಲೇ ಪ್ರತಿಕ್ರಿಯಿಸಿದ್ದ ಸಿಧು, ದಾಳಿಯ ಬಳಿಕವೂ ಶಾಂತಿ ಮಂತ್ರವೇ ಇದಕ್ಕೆ ಪರಿಹಾರ ಎಂದು ಪುನರ್ ಉಚ್ಚರಿಸಿದ ಸಿಧು, ಯಾರು ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇದುವೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ. 71 ವರ್ಷಗಳಿಂದಲೂ ಇದೇ ನಡೆಯುತ್ತಿದೆ. ಭಯೋತ್ಪಾಧನೆಯಿಂದ ಏನು ಸಾಧಿಸಲು ಆಗುವುದಿಲ್ಲ. ಇದಕ್ಕೆ ಶಾಂತಿ ಮಾತುಕತೆಯೇ ಪರಿಹಾರ ಎಂದು ಹೇಳುವ ಮೂಲಕ ಪಾಕ್ ಜೊತೆಗಿನ ಮಾತುಕತೆಯನ್ನು ಸಮರ್ಥಿಸಿಕೊಂಡಿದ್ದರು.
ಪುಲ್ವಾಮಾ ದಾಳಿಯ ವಿಚಾರವಾಗಿ ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದ್ದರಿಂದ ಖ್ಯಾತ ಕಪಿಲ್ ಶರ್ಮಾ ಶೋದ ಪ್ರಮುಖ ಆಕರ್ಷಣೆ ಆಗಿದ್ದ ಕಾರ್ಯಕ್ರಮದಿಂದ ಹೊರಹಾಕಲಾಗಿದೆ.
https://www.youtube.com/watch?v=tWx5VyQ388w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv