ಚಂಡೀಗಢ: ಅಮೃತಸರ ಪೂರ್ವ ಕ್ಷೇತ್ರದ ಜನರಿಗೆ ನವಜೋತ್ ಸಿಂಗ್ ಸಿಧು ಏನೂ ಮಾಡಿಲ್ಲ ಎಂದು ಪಂಜಾಬ್ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಆರೋಪಿಸಿದ್ದಾರೆ.
ಶಿರೋಮಣಿ ಅಕಾಲಿದಳ (ಎಸ್‍ಡಿಎ) ಮಜಿತಾ ಅಸೆಂಬ್ಲಿ ಕ್ಷೇತ್ರದಿಂದ ಹಾಗೂ ಅಮೃತಸರ ಪೂರ್ವ ಕ್ಷೇತ್ರದಿಂದ ಬಿಕ್ರಮ್ ಸಿಂಗ್ ಮಜಿಥಿಯಾ ಅವರನ್ನು ಕಣಕ್ಕಿಳಿಸಿದೆ. ಸದ್ಯ ಮಜಿತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನವಜೋತ್ ಸಿಂಗ್ ಸಿಧು ಅವರು ಕಳೆದ 18 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಒಂದು ಸಾಧನೆಯನ್ನು ಕೂಡ ಮಾಡಿಲ್ಲ. ಅವರು ಮತ್ತು ಅವರ ಪತ್ನಿ ಎಸ್‍ಎಡಿ-ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಭಾಗವಾಗಿದ್ದಾರೆ. ಆದರೆ ಅಮೃತಸರ ಪೂರ್ವಕ್ಕೆ ಏನನ್ನೂ ಸಹ ಮಾಡಿಲ್ಲ. ಹಾಗಾಗಿ ಜನರು ನನ್ನನ್ನು ಅಲ್ಲಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಅವರ ದುರಹಂಕಾರ ಮತ್ತು ಸ್ವಾರ್ಥಿ ಆಡಳಿತವನ್ನು ಅಂತ್ಯಗೊಳಿಸಬೇಕು ಎಂದು ಕಿಡಿಕಾರಿದ್ದಾರೆ.
Advertisement
Advertisement
ಇದೇ ವೇಳೆ ಎಎಪಿ ನೇತೃತ್ವದ ದೆಹಲಿ ಸರ್ಕಾರ ವೈಫಲ್ಯಗಳಿಂದ ಕೂಡಿದೆ. ದೆಹಲಿಯ ಜನರಿಗೆ ಕುಡಿಯಲು ಕುಡಿಯುವ ನೀರನ್ನು ಸಹ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!
Advertisement
Advertisement
ಒಂದೇ ಒಂದು ಹೊಸ ಕಾಲೇಜು ಅಥವಾ ಆಸ್ಪತ್ರೆಯನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ. ಕೇವಲ 414 ಸರ್ಕಾರಿ ಉದ್ಯೋಗಗಳನ್ನು ನೀಡಿ ಸಾವಿರಾರು ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ನಿರಾಕರಿಸಿದೆ. ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 1,000 ನೀಡುವುದು ಸೇರಿದಂತೆ ಇಲ್ಲಿ ನೀಡುತ್ತಿರುವ ಭರವಸೆಗಳು ಸಹ ದೆಹಲಿಯಲ್ಲಿ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಣಿಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಟಿಕೆಟ್ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ