ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಶುಭಕೋರಿದ್ದಾರೆ.
ಈ ಕುರಿತಂತೆ ನವಜೋತ್ ಸಿಂಗ್ ಸಿಧು ಅವರು, ಜನರ ಧ್ವನಿ ದೇವರ ಧ್ವನಿ. ಪಂಜಾಬ್ ಜನತೆಯ ಆದೇಶವನ್ನು ವಿನಮ್ರವಾಗಿ ಸ್ವೀಕರಿಸಿ. ಆಪ್‍ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು
The voice of the people is the voice of God …. Humbly accept the mandate of the people of Punjab …. Congratulations to Aap !!!
— Navjot Singh Sidhu (@sherryontopp) March 10, 2022
ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋತಿದ್ದು, ಈ ಮಧ್ಯೆ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಪ್‍ನಿಂದ ಸರ್ಧಿಸಿದ್ದ ಜೀವನ್ ಜ್ಯೋತ್ ಕೌರ್ ಮುನ್ನಡೆಯಲ್ಲಿದ್ದರೆ, ಶಿರೋಮಣಿ ಅಕಾಲಿ ದಳದ ಬಿಕ್ರಾಂ ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ ಮತ್ತು ಮೂರನೇ ಸ್ಥಾನದಲ್ಲಿ ನವಜೋತ್ ಸಿಂಗ್ ಸಿಧು ಇದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?
ಮಧ್ಯಾಹ್ನ 1 ಗಂಟೆಯ ಟ್ರೆಂಡ್ ಪ್ರಕಾರ ಆಪ್ 91, ಕಾಂಗ್ರೆಸ್ 17, ಶಿರೋಮಣಿ ಅಖಾಲಿ ದಳ 06, ಬಿಜೆಪಿ 2, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಮನೆಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು