ಚಂಡೀಗಢ: ಪಂಜಾಬ್‍ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಕಿಡಿಕಾರಿದರು.
ಪಂಜಾಬ್‍ನ ಪಟಿಯಾಲಾದ ಸನೌರ್‍ನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಅಮಾನುಷವಾಗಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಥಳಿಸಿರುವ ವೀಡಿಯೋವನ್ನು ಟ್ವೀಟ್ ಮಾಡಿ, ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಪ್ ಕಾರ್ಯಕರ್ತರ ಇತ್ತೀಚಿನ ಕ್ರಮಗಳು ಭಗತ್ ಸಿಂಗ್ ಅವರ ಸಿದ್ಧಾಂತವನ್ನು ಸೂಚಿಸುವುದಿಲ್ಲ ಎಂದರು.
Advertisement
Change is not necessarily progress.
This is not badlaav that Punjab signed up for. Murders, Car thefts at Gunpoint, Snatching, Hooliganism & Kabza’s… Uncontrolled AAP workers fulfilling selfish motives… Poles apart from S. Bhagat Singh’s ideology of selflessness and sacrifice. pic.twitter.com/FuBmrPOAWr
— Navjot Singh Sidhu (@sherryontopp) April 1, 2022
ಕೇಜ್ರಿವಾಲ್, ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ನಿಮ್ಮ ಜನರು ದೆಹಲಿಯಲ್ಲಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ. ನೀವು ಪಂಜಾಬಿಗಳ ಪ್ರಾಣದ ಬಗ್ಗೆಯೂ ಚಿಂತಿಸಬೇಕೇ? ದೆಹಲಿಯಲ್ಲಿ ನಡೆದರೆ ಅದನ್ನು ವಿಧ್ವಂಸಕ ಎಂದು ಕರೆಯುತ್ತೀರಿ. ಪಂಜಾಬ್‍ನಲ್ಲಿ ಏನಾಗುತ್ತಿದೆ ನೋಡಿ. ಮತ್ತೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸನೌರ್‌ನಲ್ಲಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್
Advertisement
Advertisement
ಪಂಜಾಬ್‌ನಲ್ಲಿ ಕೊಲೆ, ಕಾರು ಕಳ್ಳತನ, ಸ್ನ್ಯಾಚಿಂಗ್, ಗೂಂಡಾಗಿರಿ ಮಾಡುವ ಮೂಲಕ ಆಪ್ ಕಾರ್ಯಕರ್ತರು ತಮ್ಮ ಸ್ವಾರ್ಥ ಉದ್ದೇಶಗಳನ್ನು ಪೂರೈಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು