ಚಂಡೀಗಢ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಅವರ ಕುಟುಂಬವನ್ನು ಭೇಟಿ ಮಾಡಿ ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಧರ್ಮಿಂದರ್ ಸಿಂಗ್ ಅವರ ಮನೆಗೆ ಭೇಟಿ ನೀಡಿದ ಅವರು, ಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ, ಆದರೆ ಪೊಲೀಸರು ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿದ್ದರೆ, ನಾವು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆ
Advertisement
Advertisement
ಇದೇ ವೇಳೆ ಧರ್ಮಿಂದರ್ ಸಿಂಗ್ ಅವರ ತಂದೆ, ಪೊಲೀಸರು ಮತ್ತು ಸರ್ಕಾರ ಈ ವಿವಾರದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಂಬಿದ್ದೇವೆ. ಇದೀಗ ಅವರಿಬ್ಬರ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
Advertisement
Advertisement
ವೈಯಕ್ತಿಕ ದ್ವೇಷದ ಹಿನ್ನೆಲೆ ಪಂಜಾಬಿ ವಿಶ್ವವಿದ್ಯಾಲಯದ ಎದುರು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಬಳಿಕ ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಅವರನ್ನು ಪ್ರತಿಸ್ಪರ್ಧಿ ಬಣದ ಗುಂಪು ಗುರಿಯಾಗಿಸಿಕೊಂಡಿದೆ. ವಿರೋಧಿ ಬಣದ ದ್ವೇಷದಿಂದ ಮಂಗಳವಾರ ರಾತ್ರಿ ಧರ್ಮಿಂದರ್ ಸಿಂಗ್ ಅವರಿಗೆ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನೂ ಘಟನೆಯ ವೀಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.