ಸ್ಯಾಂಡಲ್‌ವುಡ್‌ನ ಗಾಯಕ, ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ.

ಚಂದನವನದಲ್ಲಿ ಗಾಯಕ, ಸಂಗೀತ ಸಂಯೋಜಕ, ಬರಹಗಾರ ಮೂಲಕ ಮೋಡಿ ಮಾಡಿರುವ `ಬಿಗ್ ಬಾಸ್’ ಖ್ಯಾತಿಯ ನವೀನ್ ಸಜ್ಜು ಮನೆಯಲ್ಲಿ ಸಂತಸ ಮಾಡಿದೆ. ಹೊಸ ಮನೆಯ ಹೊಸ ಹೊಸ್ತಿಲಲ್ಲಿ ಗಾಯಕ ನವೀನ್ ಸಜ್ಜು ಇದ್ದಾರೆ. ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ನಟಿ ಅಕ್ಷತಾ ಪಾಂಡವಪುರ ಕೂಡ ನವೀನ್ ಮನೆಯ ಗೃಪ್ರವೇಶದಲ್ಲಿ ಪಾಲ್ಗೋಂಡಿದ್ದಾರೆ. ನವೀನ್ ಹೊಸ ಮನೆಯ ಫೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ
View this post on Instagram
`ಮಾನಸು’ ಇವತ್ತು ಮೈಸೂರಿನಲ್ಲಿ ನಮ್ಮ ನವೀನ್‌ನ ಮನೆ ಓಪನಿಂಗ್ ಇತ್ತು. ಚಂದದ ಮನೆ, ಮುಂದಿನ ಎಲ್ಲಾ ದಿನಗಳೂ ಹೀಗೆ ಮನೆಯಷ್ಟೇ ಚಂದವಾಗಿರಲಿ ಎಂದು ನಟಿ ಅಕ್ಷತಾ ಶುಭಹಾರೈಸಿದ್ದಾರೆ. ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ನವೀನ್ ಸಜ್ಜು, ಹೊಸ ಮನೆಯ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿ ಸ್ನೇಹಿತರು ಸಾಕ್ಷಿಯಾಗಿದ್ದಾರೆ.
Live Tv

