‘ಮ್ಯಾನ್ಷನ್ ಹೌಸ್ ಮುತ್ತು’ ಚಿತ್ರಕ್ಕೆ ನವೀನ್ ಸಜ್ಜು ಹೀರೋ: ಯಾರಿವ ಮುತ್ತು ವಿತ್? Exclusive Photos

Public TV
1 Min Read
FotoJet 5 14

ನ್ನಡದ ಪ್ರತಿಭಾವಂತ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು, ಇದೀಗ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಈ ಹಿಂದೆಯೂ ಇವರ ನಾಯಕನಾಗಿ ನಟಿಸಿರುವ ಸಿನಿಮಾದ ಬಗ್ಗೆ ಸುದ್ದಿ ಇತ್ತು. ಇದೀಗ ಸದ್ದಿಲ್ಲದೇ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಈ ಸಿನಿಮಾಗೆ ‘ಮ್ಯಾನ್ಷನ್ ಹೌಸ್ ಮುತ್ತು’ ಎಂದು ಹೆಸರಿಡಲಾಗಿದೆ.

FotoJet 7 7

ಈಗಾಗಲೇ ‘ಕೆಮೆಸ್ಟ್ರಿ ಆಫರ್ ಕರಿಯಪ್ಪ’ ಹಿಟ್ ಚಿತ್ರ ಕೊಟ್ಟಿರುವ ಕುಮಾರ್, ಈ ಚಿತ್ರದ ನಿರ್ದೇಶಕರು. ಲಾಕ್ ಡೌನ್ ಬಿಡುವಿನ ವೇಳೆಯನ್ನು ಬಳಸಿಕೊಂಡು ಈ ಸಿನಿಮಾದ ಶೂಟಿಂಗ್ ಮಾಡಿದ್ದಾರಂತೆ ನಿರ್ದೇಶಕರು. ಬಹುತೇಕ ಶೂಟಿಂಗ್ ಮಡಿಕೇರಿಯಲ್ಲಿ ನಡೆದಿದೆಯಂತೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

FotoJet 76

ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ ನಿರ್ದೇಶಕ ಕುಮಾರ್ ‘ಇದೊಂದು ಪ್ರಕೃತಿ ಪ್ರೇಮಿ ಮುತ್ತುವಿನ ಕಥೆ. ಅವನು ಮನೆಯೊಂದರಲ್ಲಿ ಮಾಣಿ. ಅವನಿಗೆ ಪ್ರಕೃತಿ ಎಂದರೆ ಪ್ರಾಣ. ಅದನ್ನು ಉಳಿಸಲು ಅವನು ಕ್ರಾಂತಿಯೊಂದನ್ನು ಮಾಡಬೇಕಾಗುತ್ತದೆ. ಆ ಕ್ರಾಂತಿಯ ಕಥೆಯೇ ಸಿನಿಮಾ’ ಎನ್ನುತ್ತಾರೆ.

FotoJet 4 28

ಈ ಚಿತ್ರದಲ್ಲಿ ನವೀನ್ ಸಜ್ಜು ಡಬಲ್ ಪಾತ್ರ ಮಾಡಿದ್ದಾರೆ. ತೆರೆಯ ಮೇಲೆ ನಾಯಕನಾಗಿ ನಟಿಸಿದರೆ, ತೆರೆಯ ಹಿಂದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎರಡೆರಡು ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಸಜ್ಜು. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

FotoJet 6 9

ಬರೋಬ್ಬರಿ 40 ದಿನಗಳ ಕಾಲ ಸತತವಾಗಿ ಮಡಿಕೇರಿಯಲ್ಲಿ ಶೂಟಿಂಗ್ ಮಾಡಿದ್ದಾರಂತೆ ನಿರ್ದೇಶಕರು. ಪ್ರಕೃತಿಯ ಮಡಿಲಲ್ಲೇ ಇಡೀ ದೃಶ್ಯಗಳು ರೂಪುಗೊಂಡಿದ್ದರಿಂದ, ಆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಸಿಲ್ಲಿಲಲ್ಲಿ ಆನಂದ್, ಸಮೀಕ್ಷಾ, ಸತೀಶ್ ಚಂದ್ರ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ಕ್ರಿಟಿಕಲ್ ಕೀರ್ತನೆಗಳು ಸಿನಿಮಾದ ನಂತರ ನಿರ್ದೇಶಕರು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಕ್ರಿಟಿಕಲ್ ಕೀರ್ತನೆಗಳು ಸಿನಿಮಾ ಕೂಡ ಸಂಪೂರ್ಣ ಶೂಟಿಂಗ್ ಮುಗಿಸಿದೆ.

Share This Article