ಹಾವೇರಿ: ಕೊನೆಗೂ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತಾಯ್ನಾಡಿಗೆ ಬರುತ್ತಿದೆ. ಸೋಮವಾರ ಬೆಳಗ್ಗೆ ಸುಮಾರು 9.30ಗೆ ಮೃತದೇಹ ಮನೆಗೆ ಬರಲಿದೆ ಎಂದು ಶೇಖರ ಗೌಡ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲತೆಗಾಗಿ ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹ ಡೊನೇಟ್ ಮಾಡುತ್ತೇವೆ ಎಂದ ಅವರು ಮೃತದೇಹ ಬರಲು ಶ್ರಮಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ
Advertisement
Advertisement
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟು ಇಂದಿಗೆ 19 ದಿನಗಳು ಕಳೆದಿದೆ. ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ನಿವಾಸಕ್ಕೆ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಾರ್ಚ್ 21ಕ್ಕೆ ಬೆಳಗ್ಗೆ ನವೀನ್ ಮೃತದೇಹ ಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿವಾಸಕ್ಕೆ ಸಾಸಕರು ಭೇಟಿ ನೀಡಿದ್ದಾರೆ.
Advertisement
ಶಾಸಕ ಅರುಣ್ ಕುಮಾರ್ ಅವರಿಗೆ ತಹಶೀಲ್ದಾರ್ ಶಂಕರ.ಜಿ.ಎಸ್ ಸಾಥ್ ನಿಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮಡಿದ ನವೀನ್ ಪಾರ್ಥೀವ ಶರೀರ ಕೊನೆಗೂ ತಾಯ್ನಾಡಿಗೆ