ನವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ 9 ದಿನಗಳಿಗೆ 9 ಬಣ್ಣದ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.
ಯಾವ ದಿನ, ಯಾವ ಬಣ್ಣದ ಉಡುಪು?
1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ.
Advertisement
Advertisement
2. ಬ್ರಹ್ಮಚಾರಿಣಿ: ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ.
Advertisement
Advertisement
3. ಚಂದ್ರಘಂಟಾ: ಮೂರನೇ ದಿನ ಚಂದ್ರಘಂಟ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಗ್ರೇ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ಇದನ್ನೂ ಓದಿ: ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?
4. ಕೂಷ್ಮಾಂಡಾ ದೇವಿ: ನಾಲ್ಕನೇ ದಿನ ಕೂಷ್ಮಾಂಡಾದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕಿತ್ತಲೆ ಹಣ್ಣಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕಿತ್ತಲೆ ಹಣ್ಣಿನ ಬಣ್ಣ ಪ್ರಿಯೆ ಎನ್ನುವ ನಂಬಿಕೆಯಿದೆ.
5. ಸ್ಕಂದ ಮಾತೆ: ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಇದನ್ನೂ ಓದಿ: ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ
6. ಕಾತ್ಯಾಯಿನಿ: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ: ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್
7. ಕಾಳರಾತ್ರಿ: ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ
8. ಮಹಾಗೌರಿ: ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನೂ ಓದಿ: ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ
9. ಸಿದ್ಧಿದಾತ್ರಿ: ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ಪರ್ಪಲ್ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಇದನ್ನೂ ಓದಿ: ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ
ಕಪ್ಪು ಬಣ್ಣ:
ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ.