ಮಂಗಳೂರು: ಬೇಸಿಗೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದಿಂದ ಕಡಲ ನಗರಿ ಮಂಗಳೂರಿಗೆ ಸಾವಿರಾರು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ.
ಹಡಗಿನ ಮೂಲಕ ಬರುವ ವಿದೇಶಿ ಪ್ರವಾಸಿಗರು ಹಲವು ದಿನಗಳ ಕಾಲ ಮಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಇಲ್ಲಿನ ಸಂಸ್ಕ್ರತಿ, ಜನ ಜೀವನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಅದರಂತೆ ಇಂದು ಮಂಗಳೂರಿನ ನವಮಂಗಳೂರು ಬಂದರ್‌ಗೆ ವಿದೇಶಿ ಪ್ರವಾಸಿಗರು ಇರುವ ಕೋಸ್ಟಾ ವಿಕ್ಟೋರಿಯಾ ಎಂಬ ವಿದೇಶಿ ಹಡಗು ಆಗಮಿಸಿದೆ.
ಕೋಸ್ಟಾ ವಿಕ್ಟೋರಿಯಾ ಹಡಗು ಈ ಬಾರಿಯ 13ನೇ ವಿದೇಶಿ ಹಡಗಾಗಿದೆ. ಈ ವಿದೇಶಿ ಹಡಗಿನಲ್ಲಿ 1,800 ಪ್ರವಾಸಿಗರು ಮತ್ತು 800 ಸಿಬ್ಬಂದಿ ಆಗಮಿಸಿದ್ದರು. ಮಂಗಳೂರಿಗೆ ಬಂದ ಪ್ರವಾಸಿಗರು ಮಂಗಳೂರಿನ ಪ್ರಸಿದ್ಧ ಚರ್ಚ್, ದೇವಸ್ಥಾನ ಮತ್ತು ಮಾರುಕಟ್ಟೆ ಪ್ರದೇಶ, ಬೀಚ್ ಹಲವು ಕಡೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಮುಂಬೈನಿಂದ ಬಂದ ಕೋಸ್ಟಾ ವಿಕ್ಟೋರಿಯಾ ಹಡಗು ಮುಂದೆ ಕೊಚ್ಚಿನ್‍ಗೆ ಪ್ರಯಾಣ ಬೆಳೆಸಲಿದೆ.