LatestMain PostNational

ಪೊಲೀಸ್ ಠಾಣೆಯಲ್ಲೇ ಅರೆನಗ್ನವಾಗಿ ಓಡಾಡಿದ ಹೆಡ್‍ಕಾನ್‍ಸ್ಟೇಬಲ್

ಲಕ್ನೋ: ಉತ್ತರ ಪ್ರದೇಶದ ಪೋಲಿಸ್ ಠಾಣೆಯೊಂದರಲ್ಲಿ ಹೆಡ್‍ಕಾನ್‍ಸ್ಟೇಬಲ್ ಒಬ್ಬ ಒಳಉಡುಪಿನಲ್ಲಿಯೇ ತಿರುಗಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಠಾಣೆಯ ಎಸ್‍ಪಿ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಆದ ವೀಡಿಯೋ ನೌತನ್ವಾ ಪೊಲೀಸ್ ಠಾಣೆಯದ್ದಾಗಿದ್ದು, ಹೆಡ್‍ಕಾನ್‍ಸ್ಟೇಬಲ್ ಗಂಗೋತ್ರಿ ಯಾದವ್ ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

ಭಾನುವಾರ ಸಂಜೆ ಇದ್ದಕ್ಕಿದ್ದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ವೀಡಿಯೋದಲ್ಲಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಒಳಉಡುಪು ಧರಿಸಿ ಆವರಣದಲ್ಲಿ ಓಡಾಡುತ್ತಿದ್ದನು. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ಇದಲ್ಲದೇ ಮಹಿಳಾ ದೂರುದಾರರೂ ಅಲ್ಲಿಗೆ ಬರುತ್ತಿರುತ್ತಾರೆ. ಹೀಗಿರುವಾಗ ಆತ ಈ ರೀತಿ ಅರೆ ನಗ್ನವಾಗಿ ಓಡಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವೀಡಿಯೋದಲ್ಲಿ, ಆತ ಪೊಲೀಸ್ ಠಾಣೆಯ ಕಚೇರಿಯ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಸಮಯದ ನಂತರ ಅವನು ಕಚೇರಿಯಿಂದ ಹೊರನಡೆದಿದ್ದಾನೆ. ವಿಷಯ ತಿಳಿದ ಎಸ್‍ಪಿ ಡಾ.ಕೌಸ್ತುಭ್ ಅವರು, ತಕ್ಷಣವೇ ಪೇದೆ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 5 ದಿನವಾದ್ರೂ ಸಿಗದ ಆ್ಯಸಿಡ್ ನಾಗನ ಸುಳಿವು- ಪಾಗಲ್ ಪ್ರೇಮಿಯ ಪ್ರೀಪ್ಲ್ಯಾನ್ ಕೇಳಿ ಪೊಲೀಸ್ರೇ ಶಾಕ್

ಈ ಕುರಿತು ಎಸ್‍ಪಿ ಅವರು, ಎಲ್ಲ ಪೊಲೀಸರಿಗೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ಒಳ ಉಡುಪು ಧರಿಸುವುದು ಸಲ್ಲದು. ಅಲ್ಲಿಗೆ ಮಹಿಳೆಯರೂ ದೂರುಗಳೊಂದಿಗೆ ಬರುತ್ತಲೇ ಇರುತ್ತಾರೆ. ವೀಡಿಯೋ ಆಧಾರದ ಮೇಲೆ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

Leave a Reply

Your email address will not be published.

Back to top button