ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘ಟಾಕ್ಸಿಕ್’ (Toxic Film) ಚಿತ್ರದ ಕೆಲಸ ಎಲ್ಲಿಯವರೆಗೆ ಬಂತು ಎಂದು ಕೇಳುವವರಿಗೆ ಇಲ್ಲಿದೆ ಲೇಟೆಸ್ಟ್ ಸುದ್ದಿ. ಸದ್ಯ ಚಿತ್ರೀಕರಣಕ್ಕಾಗಿ ಯಶ್ & ಟೀಮ್ ಲಂಡನ್‌ಗೆ ಹಾರಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ (Yash) ಕೈಜೋಡಿಸಿದ್ದಾರೆ. ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. 150ಕ್ಕೂ ಹೆಚ್ಚು ದಿನ ಶೂಟಿಂಗ್ ಮಾಡಲು ಯಶ್ ಪ್ಲ್ಯಾನ್ ಮಾಡಿದ್ದಾರೆ. ಸಿನಿಮಾದ ಬಹುಪಾಲು ಚಿತ್ರೀಕರಣ ಲಂಡನ್‌ನಲ್ಲಿಯೇ (London) ಆಗಲಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಗೋವಾ ಡ್ರಗ್ಸ್ ಮಾಫಿಯಾ ಕಥೆಯನ್ನು ತೋರಿಸಲಾಗುತ್ತದೆ. ಕೆವಿಎನ್ ಸಂಸ್ಥೆ ಜೊತೆ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. 2025ರ ಏ.10ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.