Bengaluru CityCinemaDistrictsKarnatakaLatestMain PostSandalwood

ಚಿತ್ರರಂಗದಲ್ಲೇ ಧೂಳೆಬ್ಬಿಸಿರೋ ಕೆಜಿಎಫ್‌ನಲ್ಲಿ ಯಶ್‌ಗೆ ರೆಟ್ರೋ ಲುಕ್ ಕೊಟ್ಟಿದ್ದು ಇವರೇ..!

Advertisements

ವಿಶ್ವದ ಮೂಲೆ ಮೂಲೆಯಲ್ಲೂ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಾಕ್ಸ್ ಆಫೀಸ್ ಮಾಡುತ್ತಿದೆ. ಅಷ್ಟರ ಮಟ್ಟಿಗೆ ರಾಕಿಭಾಯ್ ಚಿತ್ರ ನೋಡಿ ಅಭಿಮಾನಿಗಳು ಫ್ಲಾಟ್ ಆಗಿದ್ದಾರೆ. `ಕೆಜಿಎಫ್ 2′ ಬಂದಮೇಲೆ ರಾಕಿಭಾಯ್ ಡೈಲಾಗ್ ಅಷ್ಟೇ ಟ್ರೆಂಡ್ ಆಗಿಲ್ಲ. ರಣಧೀರನ ಸ್ಟೈಲ್‌ ಕೂಡ ಟ್ರೆಂಡ್ ಸೃಷ್ಟಿಸಿದೆ.

ʻಕೆಜಿಎಫ್ʼ ಚಾಪ್ಟರ್ 1 ಮತ್ತು ಚಾಪ್ಟರ್ 2 ನೋಡಿರೋ ರಾಕಿಭಾಯ್ ಫ್ಯಾನ್ಸ್, ಸಿನಿಮಾ ನೋಡಿ ಮಾತ್ರ ಇಷ್ಟಪಟ್ಟಿಲ್ಲ. ರಾಕಿಭಾಯ್ ಸ್ಟೈಲ್ ಉಘೇ ಉಘೇ ಅಂದಿದ್ದಾರೆ. ಇಡೀ ಸಿನಿಮಾದಲ್ಲಿನ ಯಶ್ ಲುಕ್ ಹಿಂದೆಯಿರೋ ರೂವಾರಿ ಅಂದ್ರೆ ಸೆಲೆಬ್ರೆಟಿ ಡಿಸೈನರ್ ಸಾನಿಯಾ ಸರ್ದಾರಿಯಾ ಕಾರಣ. `ಕೆಜಿಎಫ್’ ಚಿತ್ರ ಗೆಲ್ಲೋದರ ಜೊತೆಗೆ ರಾಕಿಭಾಯ್ ಸ್ಟೈಲ್ ಕೂಡ ಗೆದ್ದಿದೆ ಅಂದ್ರೆ ಸಾನಿಯಾ ಸರ್ದಾರಿಯಾ ಅವರ ಕಾರ್ಯವೈಖರಿ ಕೂಡ ಗೆದ್ದಿದೆ.

ಚಿತ್ರದಲ್ಲಿನ ಯಶ್ ಗಡ್ಡದಿಂದ ಹಿಡಿದು ಸೂಟ್, ವಾಚ್, ಬೂಟ್ಸ್ ಪ್ರತಿಯೊಂದನ್ನು ಪಾತ್ರದ ತಕ್ಕಂತೆ ಸಾನಿಯಾ ನಿಗಾ ವಹಿಸಿದ್ದಾರೆ. ರಾಕಿಭಾಯ್ ಪಾತ್ರಕ್ಕೆ ಸಾನಿಯಾ ಅವರ ಬಳಿಯೇ ಕಸ್ಟ್ಮೈಸ್ ಮಾಡಿಸಿದ್ದಾರೆ. ರಾಕಿಭಾಯ್ ಸ್ಟೈಲ್‌ಗೆ ರೆಟ್ರೋ ಲುಕ್ ಕೊಟ್ಟು ಡಿಫರೆಂಟ್ ಆಗಿ ಸಾನಿಯಾ ಆನ್‌ಸ್ಕ್ರೀನ್‌ನಲ್ಲಿ ಯಶ್‌ನ ತೋರಿಸಿದ್ರು. ಇದೀಗ ಯಶ್ ಲುಕ್, ಅಗ್ರಸ್ಥಾನದಲ್ಲಿದೆ. ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಯಶ್ ಲುಕ್ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಇದನ್ನೂ ಓದಿ:ಮನಾಲಿಗೆ ಹೊರಟ ರಣ್‌ಬೀರ್ ಕಪೂರ್ ಆದರೆ ಹನಿಮೂನ್‌ಗಾಗಿ ಅಲ್ಲ!

`ಕೆಜಿಎಫ್ ಚಾಪ್ಟರ್ 2′ ಸಿನಿಮಾ ಸೌಂಡ್ ಮಾಡುವುದರ ಜತೆಗೆ ರಾಕಿಭಾಯ್ ಸ್ಟೈಲ್‌ಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಪ್ರಚಾರದ ವೇಳೆಯೂ ರಾಕಿಭಾಯ್ ಧರಿಸಿದ್ದ ಡ್ರೇಸ್ ಲುಕ್ ಗಮನ ಸೆಳೆದಿತ್ತು. ಹೀಗೆ ಸಾಕಷ್ಟು ಸಿನಿಮಾಗಳಿಗೆ ಸೆಲೆಬ್ರೆಟಿ ಡಿಸೈನರ್‌ ಆಗಿ ಸಾನಿಯಾ ಗುರುತಿಸಿಕೊಂಡಿದ್ದಾರೆ. ಇನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೆಜಿಎಫ್ ತಂಡ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ರಾಕಿಭಾಯ್ ಮೇನಿಯಾ ಕೂಡ ಜೋರಾಗಿದೆ.

Leave a Reply

Your email address will not be published.

Back to top button