ನೆಲಮಂಗಲ: ಭವಿಷ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯುವ ವಿಜ್ಞಾನಿಗಳನ್ನು ಹುಡುಕುವ ಸಲುವಾಗಿ ದೇಶದಲ್ಲಿ ಜಾರಿಯಲ್ಲಿರುವ ಎನ್‍ಎಸ್‍ಟಿಎಸ್‍ಇ (National Science Talent Search Exam) ಪರೀಕ್ಷೆ ಇಂದು ಥಾಮಸ್ ಮೆಮೊರಿಯಲ್ ಶಾಲೆಯಲ್ಲಿ ಪ್ರಾರಂಭವಾಯಿತು.
ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಥಾಮಸ್ ಮೆಮೂರಿಯಲ್ ಶಾಲೆಯ 128 ವಿದ್ಯಾರ್ಥಿಗಳು ಇಂದು ಪರೀಕ್ಷೆಯಲ್ಲಿ ಪಾಲ್ಗೊಂಡರು. ರಾಷ್ಟ್ರೀಯ ಮಟ್ಟದ ಪ್ರತಿಭೆ ಗುರುತಿಸುವ ಪರೀಕ್ಷೆ ಇದಾಗಿದ್ದು, ಮಕ್ಕಳಲ್ಲಿ ಶಾಲಾ ಹಂತದಿಂದಲೇ ವೈಜ್ಞಾನಿಕ ಪರಿಕಲ್ಪನೆ ಬೆಳೆಸುವ ಉದ್ದೇಶವಾಗಿದೆ.
ಕಳೆದ ಬಾರಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿನಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಚಾಲನೆ ನೀಡಿದಳು. ಎಲ್ಲಾ ಮಕ್ಕಳೊಂದಿಗೆ ಸಾಮೂಹಿಕ ಪ್ರಾರ್ಥನೆ ಮಾಡಿ ಪರೀಕ್ಷೆ ಪ್ರಾರಂಭಿಸಲಾಯಿತು. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಎಲ್ಲಾ ವೆಚ್ಚವನ್ನು ಕೇಂದ್ರ ಪರೀಕ್ಷಾ ಮಂಡಳಿ ಭರಿಸಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಪ್ರಥಮ ಪರೀಕ್ಷಾ ಕೇಂದ್ರ ಈ ಶಾಲೆಯಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮಕ್ಕಳೆಲ್ಲರೂ ಉತ್ತಮ ಅಂಕಗಳಿಸುವತ್ತ ಅಭ್ಯಾಸ ನಡೆಸಲಿ ಎಂದು ಸಂಸ್ಥೆಯ ನಿರ್ದೇಶಕ ವಿನೋದ್ ಹಾಗೂ ರವಿ ಶುಭ ಕೋರಿದರು. ಪರೀಕ್ಷೆಯು ಅತ್ಯಾಧುನಿಕ ಶೈಲಿಯಲ್ಲಿ ಒ.ಎಂ.ಆರ್ ಪ್ರಶ್ನೆ ಪತ್ರಿಕೆ ಮೂಲಕ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಿದ್ದು ಕಂಡುಬಂದಿತು.