ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿರುವ ವಿಮಾನ ನಿಲ್ದಾಣ ಕರ್ನಾಟಕದಲ್ಲೇ ಮೂರನೇ ಅತಿ ದೊಡ್ಡ ನಿಲ್ದಾಣವಾಗಿದ್ದು, ಸರಿ ಸುಮಾರು 150 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಮೂಲಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಕೇಂದ್ರ ಸರ್ಕಾರ ರೂಪಿಸಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‍ಲೈನ್ ಎನ್‍ಎಂಪಿ (ರಾಷ್ಟ್ರೀಯ ನಗದೀಕರಣ ಯೋಜನೆ)ಯೋಜನೆಯಡಿ ಖಾಸಗಿಗೆ ವಹಿಸಿಕೊಡಲು ಹುಬ್ಬಳ್ಳಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಗುರುತಿಸಲಾಗಿದೆ.
Advertisement
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉಡಾನ್ ಯೋಜನೆಯಡಿ ವಿಮಾನಗಳ ಸಂಖ್ಯೆ ಹೆಚ್ಚಿಸಿದ ಪರಿಣಾಮ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೀಗಾಗಿಯೇ ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರಯಾಣಿಕರ ಸಾಂದ್ರತೆ ಹೊಂದಿರುವ ನಿಲ್ದಾಣಗಳಲ್ಲೊಂದಾಗಿದೆ. ದೇಶದ 25 ನಿಲ್ದಾಣಗಳನ್ನು ಎನ್‍ಎಂಪಿ ಯೋಜನೆಗೊಳಪಡಿಸಿದ್ದು, ರಾಜ್ಯದ ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ. ನೀತಿ ಆಯೋಗ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ 25 ನಿಲ್ದಾಣಗಳಿಂದ 20,782 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹುಬ್ಬಳ್ಳಿ ನಿಲ್ದಾಣದಿಂದ 130 ಕೋಟಿ ರೂ.ಗಳಿಗೆ ಖಾಸಗಿ ತೆಕ್ಕೆಗೆ ನೀಡುವ ಉದ್ದೇಶಿಸಲಾಗಿದೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ
Advertisement
Advertisement
ನಾಲ್ಕು ಹಂತಗಳಲ್ಲಿ ಏರ್‌ಪೋರ್ಟ್ ಗಳನ್ನು ಖಾಸಗಿಗೆ ವಹಿಸಿಕೊಡಲಾಗುತ್ತಿದ್ದು, ಹುಬ್ಬಳ್ಳಿ ನಿಲ್ದಾಣವನ್ನು 2023-24ನೇ ಸಾಲಿಗೆ ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ (2021-22)ವಾರಾಣಸಿ, ನಾಗ್ಪುರ ಮತ್ತು ಭುವನೇಶ್ವರ, ಅಮೃತಸರ, ತಿರುಚಿ, ಇಂದೋರ್, ರಾಯಪುರ್ ನಿಲ್ದಾಣಗಳಿಂದ 3,600 ಕೋಟಿ ರೂ., ಹಾಗೂ 2022-23ರಲ್ಲಿ ಕ್ಯಾಲಿಕಟ್, ಕೊಯಮತ್ತೂರು, ನಾಗಪುರ್, ಪಾಟ್ನಾ, ಮಧುರೈ, ಸೂರತ್, ರಾಂಚಿ, ಜೋಧಪುರ್ ನಿಲ್ದಾಣಗಳಿಂದ 4,295 ಕೋಟಿ ರೂ, 2023-24ರಲ್ಲಿ ಚೆನ್ನೈ, ವಿಜಯವಾಡಾ, ತಿರುಪತಿ, ವಡೋದರ, ಭೋಪಾಲ್, ಹುಬ್ಬಳ್ಳಿ ನಿಲ್ದಾಣಗಳಿಂದ 4,193 ಕೋಟಿ ರೂ. ಮತ್ತು 2024-25ರಲ್ಲಿ ಇಂಪಾಲ, ಅಗರ್ತಲಾ, ಉದಯಿಪುರ್, ಡೆಹ್ರಾಡೂನ್, ರಾಜಮುದ್ರಿ ನಿಲ್ದಾಣಗಳನ್ನು ಆಯ್ಕೆ ಮಾಡಿದ್ದು ಇವುಗಳಿಂದ 1,857 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ
Advertisement
The Asset Monetisation programme is necessary for creating employment opportunities, thereby enabling high #economic growth and seamlessly integrating the rural and semi-urban areas for overall public welfare: FM @nsitharaman
Know more: https://t.co/QWZjxeeIKN pic.twitter.com/WWv3i1qlMW
— NITI Aayog (@NITIAayog) August 23, 2021
ಆದರೆ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ವಹಣೆ ಖಾಸಗಿಯವರಿಗೆ ವಹಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.