ಮಡಿಕೇರಿ: ಜಿಟಿಜಿಟಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿಯಲ್ಲಿದ್ದು, ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮಡಿಕೇರಿಯಿಂದ 5 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್ ಹೆದ್ದಾರಿ ಕುಸಿದಿದೆ. ಕಳೆದ ಬಾರಿ ಕುಸಿದಿದ್ದ ರಸ್ತೆಯಲ್ಲಿ ಈಗ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಬಿರುಕು ಕಾಣಿಸಿಕೊಂಡಿದ್ದರಿಂದ ಹೆದ್ದಾರಿ ಪ್ರಾಧಿಕಾರ ಸಿಮೆಂಟ್ ಚೀಲ ಇಟ್ಟು ಕುಸಿದಿದ್ದ ರಸ್ತೆ ಸರಿ ಮಾಡಿದ್ದರು.
Advertisement
Advertisement
ಇಂದು ಸುರಿದ ಸಾಧಾರಣ ಮಳೆಗೆ ಹೆದ್ದಾರಿ ಮತ್ತೆ ಬಿರುಕು ಬಿಟ್ಟಿದೆ. ವಾಹನ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆ ಬಿರುಕು ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ರಸ್ತೆ ಕುಸಿದರೆ ಮಡಿಕೇರಿ – ಮಂಗಳೂರು ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
Advertisement
Advertisement
ಮಳೆ ಕಡಿಮೆ ಇದ್ದರೂ ರಸ್ತೆ ಬಿರುಕಿಗೆ ಕಾರಣ ಏನು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ರಸ್ತೆ ಬಿರುಕು ಹಿಡಿದ ಕೈಗನ್ನಡಿಯಾಗಿದೆ.