ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ಇಕ್ಕಳದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಆಗ್ತಾರಾ ಅನ್ನೋ ಅನುಮಾನವೊಂದು ಹುಟ್ಟಿಕೊಂಡಿದೆ.
Delhi | Congress leader Rahul Gandhi arrived at his residence after 5th day of questioning by the Enforcement Directorate (ED) in the National Herald case. pic.twitter.com/uwrPA8W6Nm
— ANI (@ANI) June 21, 2022
Advertisement
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಇಡಿ ಡ್ರಿಲ್ ಮುಂದುವರಿದಿದ್ದು, ಇನ್ನೂ ಇಡಿ ಕಚೇರಿಯಲ್ಲೇ ಇದ್ದಾರೆ. ಮಧ್ಯರಾತ್ರಿವರೆಗೆ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ. 5ನೇ ದಿನವಾದ ಇಂದು ಕೂಡ ಬೆಳಗ್ಗೆಯಿಂದ ಇಡಿ ಕಚೇರಿಯಲ್ಲೇ ರಾಗಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ರಾಹುಲ್ ಬಂಧನಕ್ಕೆ ಸಿದ್ಧವಾಗಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿಯಿಂದ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಆಯ್ಕೆ
Advertisement
Advertisement
ಇಂದು ಬೆಳಗ್ಗೆ 11 ಗಂಟೆಗೆ ರಾಗಾ ವಿಚಾರಣೆ ಹಾಜರಾಗಿದ್ದಾರೆ. ರಾತ್ರಿ 8:30ರ ವೇಳೆಗೆ ಇಡಿ ಅಧಿಕಾರಿಗಳು ರಾಹುಲ್‍ಗೆ ವಿರಾಮ ನೀಡಿದರು. ಈ ಮೂಲಕ ಇಡೀ ದಿನ ನಿರಂತರ ವಿಚಾರಣೆ ನಡೆಸಿ ಅರ್ಧ ಗಂಟೆ ವಿರಾಮ ನೀಡಲಾಗಿತ್ತು. ಇದೀಗ ವಿರಾಮದ ಬಳಿಕ ಮತ್ತೆ ವಿಚಾರಣೆ ಮುಂದುವರಿದಿದೆ. ತಡ ರಾತ್ರಿಯವರೆಗೂ ಇಡಿ ಡ್ರಿಲ್ ಮಾಡುತ್ತಿರುವುದರಿಂದ ರಾಗಾ ಬಂಧಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರಾ ಅನ್ನೋ ಕುತೂಹಲ ಮೂಡಿದೆ.
Advertisement
Delhi | Congress leader Rahul Gandhi arrives at Enforcement Directorate (ED) office after a break of half an hour
He is being questioned for the 5th day in National Herald case. pic.twitter.com/kkBrnJsDtY
— ANI (@ANI) June 21, 2022
ಇತ್ತ ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ. ಇಡಿ ವಿಚಾರಣೆ ವಿರೋಧಿಸಿ ನಾಳೆ ದೆಹಲಿಯಲ್ಲಿ ಪ್ರೊಟೆಸ್ಟ್ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲಾ ರಾಜ್ಯಗಳ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.