ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮೌನ, ಕಾಗೆ ಬಂಗಾರ. ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪಕ್ಷದ ವಿರುದ್ಧ, ನಾಯಕರ ವಿರುದ್ಧ ಮಾತನಾಡಿದ ಕೆಲವು ನಾಯಕರಿಗೆ ನೋಟಿಸ್ ಕೂಡಾ ನೀಡಲಿಲ್ಲ, ಪ್ರಶ್ನಿಸಲಿಲ್ಲ.
ಮಹಿಳಾ ನಾಯಕಿಯೊಬ್ಬರು ಪಕ್ಷದ ನಿಲುವು ಪ್ರಶ್ನಿಸಿದಾಗ ನೋಟಿಸ್ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಮೌನ, ಕಾಗೆ ಬಂಗಾರ!#ಮೌನಿಕಾಂಗ್ರೆಸ್
— BJP Karnataka (@BJP4Karnataka) July 25, 2022
Advertisement
ನಾಳೆ ಕಾಂಗ್ರೆಸ್‍ನಿಂದ ಮೌನ ಪ್ರತಿಭಟನೆ ಹಿನ್ನೆಲೆ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ಕಾಲೆಳೆದಿದೆ. ನಕಲಿ ಗಾಂಧಿ ಕುಟುಂಬ ಗುಲಾಮಗಿರಿತನ ಪ್ರದರ್ಶನ ಮಾಡಿಕೊಂಡು ಸಮಯ ಕಳೆಯುವ ಕಾಂಗ್ರೆಸ್ ನಾಯಕರಿಂದ ಈಗ ಅದೇ ನಕಲಿ ಗಾಂಧಿ ಕುಟುಂಬದವರಿಗಾಗಿ ಮೌನ ಪ್ರತಿಭಟನೆಯಂತೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಹೊತ್ತಿನಲ್ಲೂ, ದೇಶದ ಶ್ರೇಷ್ಠತೆಯ ಬಗ್ಗೆ ಸಾರುವ ಬದಲು ನಕಲಿ ಗಾಂಧಿಗಳಿಗಾಗಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ. ಪಕ್ಷದ ವಿರುದ್ಧ, ನಾಯಕರ ವಿರುದ್ಧ ಮಾತನಾಡಿದ ಕೆಲವು ನಾಯಕರಿಗೆ ನೋಟಿಸ್ ಕೂಡಾ ನೀಡಲಿಲ್ಲ, ಪ್ರಶ್ನಿಸಲಿಲ್ಲ ಎಂದು ಕಿಡಿಕಾರಿದೆ. ಇದನ್ನೂ ಓದಿ: ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್
Advertisement
Advertisement
ಮಹಿಳಾ ನಾಯಕಿಯೊಬ್ಬರು ಪಕ್ಷದ ನಿಲುವು ಪ್ರಶ್ನಿಸಿದಾಗ ನೋಟಿಸ್ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಮೌನ, ಕಾಗೆ ಬಂಗಾರ. ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ಸಿಗರು ದಿವ್ಯ ಮೌನಕ್ಕೆ ಶರಣಾಗುತ್ತಿರುವುದು ಹೊಸತೇನಲ್ಲ. ಈ ಹಿಂದೆ ಹಿಂದೂಗಳ ಮೇಲೆ, ದಲಿತರ ಮೇಲೆ, ಮಹಿಳೆಯರ ಮೇಲೆ, ರೈತರ ಮೇಲೆ, ಸೈನಿಕರ ಮೇಲೆ, ಬಡವರ ಮೇಲೆ ದೌರ್ಜನ್ಯವಾದಾಗ ಕಾಂಗ್ರೆಸ್ ಬಾಯಿ ಬಿಟ್ಟಿತ್ತೆ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್