ಬೆಂಗಳೂರು: ಕರ್ನಾಟಕದ ಖಜಾನೆಯಿಂದ ನ್ಯಾಷನಲ್ ಹೆರಾಲ್ಡ್ (National Herald) ಪತ್ರಿಕೆಗೆ ಕೋಟಿಗಟ್ಟಲೆ ಜಾಹೀರಾತು ಕೊಡಲಾಗಿದೆ ಅಂತಾ ಬಿಜೆಪಿ (BJP) ಆರೋಪಿಸಿದೆ. ಕರ್ನಾಟಕದ ಜಾಹೀರಾತು ಬಜೆಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ಹಣ ಕೊಡಲಾಗಿದೆ. ಸತತ ಎರಡು ವರ್ಷಗಳ ಕಾಲ ರಾಜ್ಯದಿಂದ ಹಣ ಕೊಟ್ಟಿದ್ದು, ಎಲ್ಲ ರಾಷ್ಟ್ರೀಯ ಪತ್ರಿಕೆಗಳನ್ನು ನ್ಯಾಷನಲ್ ಹೆರಾಲ್ಡ್ ಹಿಂದಿಕ್ಕಿದೆ. ನ್ಯಾಷನಲ್ ಹೆರಾಲ್ಡ್ ಓದುಗರ ಸಂಖ್ಯೆ ಕಡಿಮೆ ಇದ್ದರೂ ರಾಷ್ಟ್ರೀಯ ಮಟ್ಟದ ಪತ್ರಿಕೆಗಿಂತ ಹೆಚ್ಚಿನ ಹಣ ಕೊಟ್ಟಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಕರ್ನಾಟಕ ಸರ್ಕಾರಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರೀತಿ ಹೆಚ್ಚಾಯ್ತಾ ಎಂದು ಸಿದ್ದರಾಮಯ್ಯ ಸರ್ಕಾರದ ಮೇಲೆ ಜಾಹೀರಾತು ಚಾರ್ಜ್‌ಶೀಟ್ ಹಾಕಿದೆ ಬಿಜೆಪಿ. ಅಂದಹಾಗೆ 2023-24 ರಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ 1.90 ಕೋಟಿ ರೂಪಾಯಿ ಜಾಹೀರಾತು. 2024-25 ರಲ್ಲಿ ಸುಮಾರು 1 ಕೋಟಿ (99 ಲಕ್ಷ) ರೂಪಾಯಿ ಜಾಹೀರಾತು ಕೊಡಲಾಗಿದೆ. 2024-25 ರಲ್ಲಿ ರಾಷ್ಟ್ರೀಯ ಮಟ್ಟದ ಪತ್ರಿಕೆಗಳಿಗೆ ಖರ್ಚು ಮಾಡಿದ ಹಣ 1.42 ಕೋಟಿ ಹಣ ಕೊಟ್ಟಿದ್ರೆ, ಶೇ. 69 ರಷ್ಟು ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ಜಾಹೀರಾತು ಹಣ ಕೊಟ್ಟಿದೆ ಎಂಬುದು ಬಿಜೆಪಿ ಆರೋಪ. ಇದನ್ನೂ ಓದಿ: ರಾಜ್ಯದ ಖಜಾನೆಯನ್ನ ಕಾಂಗ್ರೆಸ್ ತನ್ನ ಖಜಾನೆ ಮಾಡೋಕೆ ಹೊರಟಿದೆ: ಆರ್. ಅಶೋಕ್
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಪ್ರಸಾರವಿಲ್ಲದ ಪತ್ರಿಕೆಯಲ್ಲಿ ಜಾಹೀರಾತುಗೆ ಹಣ ಕೊಟ್ಟಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ನ್ಯಾಷನಲ್ ಹೆರಾಲ್ಡ್ ಸ್ಕ್ಯಾಮ್‌ನಲ್ಲಿದೆ, ಪ್ರಕರಣದಲ್ಲಿ ತಾಯಿ, ಮಗ ಬೇಲ್ ಮೇಲಿದ್ದಾರೆ. ಕರ್ನಾಟಕ ಸರ್ಕಾರದ ದುಡ್ಡು ಕೊಟ್ಟಿರೋದು ಸಿದ್ದರಾಮಯ್ಯ ಅವರ ರಾಷ್ಟ್ರೀಯ ಬೌದ್ಧಿಕ ದಿವಾಳಿತನ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಿಡಿಕಾರಿದ್ರೆ, ನ್ಯಾಷನಲ್ ಹೆರಾಲ್ಡ್ ಬೋಗಸ್ ಅಂತಾ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇನ್ನು ಡಿಸಿಎಂ ಡಿಕೆಶಿ ಸಮರ್ಥಿಸಿಕೊಂಡಿದ್ದು ಜಾಹೀರಾತು ಕೊಡುವ ಅಧಿಕಾರ ಇದೆ ಅಂತೇಳಿದ್ರೆ, ಲೀಗಲ್ ವಹಿವಾಟು ಅಂತಾ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

