ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಹೆಬ್ಬೆಟ್ಟು ರಾಮಕ್ಕ, ಬಾಹುಬಲಿಗೆ ಹಲವು ಪ್ರಶಸ್ತಿ

Public TV
2 Min Read
HEBETHU RAMAKKA BAHUBALI COLLAGE

ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ.

ಇಂದು 11.30ಕ್ಕೆ ನವದೆಹಲಿಯ ಶಾಸ್ತ್ರಿ ಭವನದಲ್ಲಿ ಶೇಖರ್ ಕಪೂರ್ ಸಾರಥ್ಯದ 10 ಜನರ ತಂಡದ ಭಾರತೀಯ ಚಿತ್ರರಂಗದ ವಿವಿಧ ಭಾಷೆಯ ಚಿತ್ರಗಳಿಗೆ ಪ್ರಶಸ್ತಿಯನ್ನು ಘೋಷಿಸಿದರು. ‘ಹೆಬ್ಬೆಟ್ಟು ರಾಮಕ್ಕ’ ಚಿತ್ರದಲ್ಲಿ ನಟಿ ತಾರಾ ಜೊತೆ ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಎನ್.ಆರ್ ನಂಜೇಗೌಡ ನಿರ್ದೇಶನ ಮಾಡಿದ್ದಾರೆ.

hebbethu ramakka

ಹೆಬ್ಬೆಟ್ಟು ರಾಮಕ್ಕ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲಿ ಶೂಟಿಂಗ್ ಮಾಡಲಾಗಿತ್ತು. ಈ ಚಿತ್ರಕ್ಕೆ ಎಸ್.ಎ ಪುಟ್ಟರಾಜು ನಿರ್ಮಿಸಿದ್ದರು. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಬಿ. ಸತೀಶ್ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು.

‘ಪಡ್ಡಾಯಿ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಲಭಿಸಿದೆ. ‘ಮಾಮ್’ ಚಿತ್ರದಲ್ಲಿ ನಟಿಸಿದ ದಿವಂಗತ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಬೆಂಗಾಲಿ ನಟ ರಿದ್ಧಿ ಸೆನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

bahubali

ಖ್ಯಾತ ತೆಲಗು ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಬೆಸ್ಟ್ ಆ್ಯಕ್ಷನ್ ಡೈರೆಕ್ಷನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಬಾಹುಬಲಿ ಚಿತ್ರತಂಡ ಹಲವು ಪ್ರಶಸ್ತಿ ಸಿಕ್ಕಿದೆ. ಬೆಸ್ಟ್ ಸೌಂಡ್ ಎಫೆಕ್ಟ್ ಚಿತ್ರ ಹಾಗೂ ಬೆಸ್ಟ್ ಎಂಟರ್‍ಟೈನ್ಮೆಂಟ್ ಸಿನಿಮಾ ಬಾಹುಬಲಿ-2ಗೆ ಲಭಿಸಿದೆ. ನಟಿ ತಾರಾ ಅಭಿನಯದ ‘ಹೆಬ್ಬೆಟ್ಟು ರಾಮಕ್ಕ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಎಂದು ಪ್ರಶಸ್ತಿ ನೀಡಲಾಗಿದೆ.

Sridevi 2

ಉಳಿದ ಸಿನಿಮಾಗಳ ಪ್ರಶಸ್ತಿ ಕೆಳಗಿನ ಸಾಲಿನಂತಿದೆ

ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್- ಎಸ್.ಎಸ್.ರಾಜಮೌಳಿ (ಬಾಹುಬಲಿ-2)
ಅತ್ಯುತ್ತಮ ತುಳು ಸಿನಿಮಾ- ಪಡ್ಡಾಯಿ
ಅತ್ಯುತ್ತಮ ಬ್ಯಾಗ್ರೌಂಡ್ ಸಿನಿಮಾ –ಎಆರ್ ರೆಹೆಮಾನ್ (ಮಾಮ್)
ಅತ್ಯುತ್ತಮ ಮ್ಯೂಸಿಕ್ ಡೈರೆಕ್ಷನ್ – ಎಆರ್ ರೆಹೆಮಾನ್ (ಕಾಟ್ರುವೆಲೈಯಾಡಿ)
ಅತ್ಯುತ್ತಮ ಸೌಂಡ್ ಎಫೆಕ್ಟ್ ಬಾಹುಬಲಿ-2
ಅತ್ಯುತ್ತಮ ಡೈರೆಕ್ಟರ್ – ನಾಗರಾಜ್ ಮಂಜುಳೆ (ದಿ ಸೈಲೆನ್ಸ್ ಹಾಗೂ ಸೈರಾಟ್ ಸಿನಿಮಾ ನಿರ್ದೇಶಕ)
ಅತ್ಯುತ್ತಮ ಸರ್ಪೋಟಿಂಗ್ ಆ್ಯಕ್ಟರ್ – ಫೈಸಲ್
ಅತ್ಯುತ್ತಮ ಫೀಮೇಲ್ ಸಿಂಗರ್ – ಷಾಶಾ ತ್ರಿಪಾಠಿ (ಕಾಟ್ರು ವೆಲ್ಯಾಡಿ – ವಾಣ)
ಪಾಲ್ಕೆ ಅವಾರ್ಡ್ – ವಿನೋದ್ ಖನ್ಹಾ
ಅತ್ಯುತ್ತಮ ನಟಿ- ಶ್ರೀದೇವಿ (ಮಾಮ್ ಚಿತ್ರ)
ಅತ್ಯುತ್ತಮ ನಟ – ರಿದ್ಧಿ ಸೆನ್ (ನಾಗರ್‍ಕಿರ್ತನ – ಬೆಂಗಾಳಿ ಮೂವಿ)
ಅತ್ಯುತ್ತಮ ಎಂಟರ್‍ಟೈನ್ಮೆಂಟ್ ಸಿನಿಮಾ – ಬಾಹುಬಲಿ-2
ಅತ್ಯುತ್ತಮ ಸಿನಿಮಾ – ವಿಲೇಜ್ ರಾಕ್‍ಸ್ಟಾರ್
ಅತ್ಯುತ್ತಮ ಅಂಡ್ವೆಂಚರ್ ಫಿಲ್ಮ್ – ಬೆಂಗಾಳಿ ಭಾಷೆಯ ಲಡ್ಕಾ ಚಲೇ ರಿಕ್ಷಾವಾಲೆ

ಮೇ ತಿಂಗಳು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *